varthabharthi


Social Media

ಸಿಯೋಲ್‌ನಿಂದ ಹೊರ ಹೋದ ಅಮೆರಿಕದ ಸೈನಿಕರು

ವಾರ್ತಾ ಭಾರತಿ : 29 Jun, 2018

ಸಿಯೋಲ್ (ದಕ್ಷಿಣ ಕೊರಿಯ), ಜೂ. 29: ದಕ್ಷಿಣ ಕೊರಿಯ ರಾಜಧಾನಿಯಲ್ಲಿ ಏಳು ದಶಕಗಳ ಅಮೆರಿಕ ಸೈನಿಕರ ಉಪಸ್ಥಿತಿಯನ್ನು ಅಮೆರಿಕದ ಶುಕ್ರವಾರ ಔಪಚಾರಿಕವಾಗಿ ಕೊನೆಗೊಳಿಸಿದೆ ಹಾಗೂ ಇಲ್ಲಿನ ತನ್ನ ಸೇನಾ ಕಮಾಂಡನ್ನು ಉತ್ತರ ಕೊರಿಯ ಫಿರಂಗಿ ವ್ಯಾಪ್ತಿಯಿಂದ ದೂರಕ್ಕೆ ಸಾಗಿಸಿದೆ.

ಅಮೆರಿಕದ ಸೇನಾ ಕಮಾಂಡನ್ನು ಸಿಯೋಲ್‌ನ ದಕ್ಷಿಣಕ್ಕೆ 70 ಕಿಲೋಮೀಟರ್ ದೂರದಲ್ಲಿರುವ ಕ್ಯಾಂಪ್ ಹಂಫ್ರಿಗೆ ಸ್ಥಳಾಂತರಿಸಲಾಗಿದೆ.

ಉತ್ತರ ಕೊರಿಯದೊಂದಿಗಿನ ಅಮೆರಿಕ ಸಂಬಂಧ ಸುಧಾರಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಎರಡನೇ ಮಹಾಯುದ್ಧದ ಕೊನೆಯ ವೇಳೆಗೆ ಬಂದ ಅಮೆರಿಕ ಪಡೆಗಳು ಸಿಯೋಲ್‌ನ ಕೇಂದ್ರ ಭಾಗದಲ್ಲಿರುವ ಯೊಂಗ್‌ಸನ್‌ನಲ್ಲೇ ಉಳಿದಿದ್ದವು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)