ರಾಜೀವಿ
ಪುತ್ತೂರು,ಜು.11: ತಾಲೂಕಿನ ನಿಡ್ಪಳ್ಳಿ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿರುವ ಪಾಣಾಜೆ ನಿವಾಸಿ ರಾಜೀವಿ(45) ಅವರು ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ತಮ್ಮ ಮನೆಯಲ್ಲಿ ನಿಧನರಾದರು.
ಕಳೆದ ಕೆಲವು ವರ್ಷಗಳ ಕಾಲ ಪಾಣಾಜೆ ಗ್ರಾ.ಪಂ ನಲ್ಲಿ ಗುಮಾಸ್ತೆಯಾಗಿ ಸೇವೆ ಸಲ್ಲಿಸಿದ್ದ ರಾಜೀವಿ ಅವರು ಬಳಿಕ ಕಾರ್ಯದರ್ಶಿಯಾಗಿ ಭಡ್ತಿ ಹೊಂದಿ ಮಾಣಿ ಗ್ರಾ.ಪಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಲ್ಲಿಂದ 2015ರ ನವೆಂಬರ್ನಲ್ಲಿ ನಿಡ್ಪಳ್ಳಿ ಗ್ರಾ.ಪಂ ಗೆ ನಿಯೋಜನೆ ಗೊಂಡು 2017ರ ಸೆಪ್ಟೆಂಬರ್ ತಿಂಗಳವರೆಗೆ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಅನಾರೋಗ್ಯ ಉಲ್ಭಣ ಗೊಂಡ ಕಾರಣ ರಜೆ ನಿಮಿತ್ತ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಮೃತರು ಪತಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
Next Story