66 ವರ್ಷಗಳ ನಂತರ ಉಗುರು ಕತ್ತರಿಸಿದ ಶ್ರೀಧರ್ ಚಿಲ್ಲಾಲ್!
ಪ್ರಪಂಚೋದ್ಯ
ಗಿನ್ನೆಸ್ ದಾಖಲೆ ಸೇರಿದ ಅವರ ಉಗುರುಗಳ ಉದ್ದ ಎಷ್ಟಿದೆ ಗೊತ್ತಾ?
ವಿಶ್ವದಲ್ಲೇ ಅತೀ ಉದ್ದದ ಉಗುರುಗಳನ್ನು ಹೊಂದಿರುವ ಗಿನ್ನೆಸ್ ದಾಖಲೆ ನಿರ್ಮಿಸಿರುವ ಪುಣೆಯ ಶ್ರೀಧರ್ ಚಿಲ್ಲಾಲ್ 66 ವರ್ಷಗಳ ನಂತರ ತಮ್ಮ ಉಗುರುಗಳನ್ನು ಕತ್ತರಿಸಿದ್ದಾರೆ.
1952ರಿಂದ ತಮ್ಮ ಎಡಗೈಯ ಉಗುರುಗಳನ್ನು ಇವರು ಬೆಳೆಸಿದ್ದು, ಒಂದು ಬಾರಿಯೂ ಕತ್ತರಿಸಿರಲಿಲ್ಲ. ಆಗ ಅವರಿಗೆ 14 ವರ್ಷ ವಯಸ್ಸು. ಚಿಲ್ಲಾಲ್ರ ಹೆಬ್ಬೆರಳ ಉಗುರು ಅತೀ ಉದ್ದದ ಉಗುರಾಗಿದ್ದು, 197.8 ಸೆಂಟಿ ಮೀಟರ್ ಇದೆ. ತೋರುಬೆರಳಿನ ಉಗುರು 164.5 ಸೆ.ಮೀ., ಮಧ್ಯ ಬೆರಳಿನ ಉಗುರು 186 ಸೆ.ಮೀ., ಉಂಗುರ ಬೆರಳಿನ ಉಗುರು 181.6 ಸೆ.ಮೀ. ಇದೆ.
ಜಗತ್ತಿನಲ್ಲೇ ಅತೀ ಉದ್ದದ ಉಗುರುಗಳನ್ನು ಹೊಂದಿರುವುದಕ್ಕಾಗಿ 2015ರಲ್ಲಿ ಅವರ ಹೆಸರು ಗಿನ್ನೆಸ್ ಬುಕ್ನಲ್ಲಿ ದಾಖಲಾಗಿತ್ತು.
Next Story