ಅವೈಜ್ಞಾನಿಕ ವಿಧಾನ
ಮಾನ್ಯರೇ,
ಕರ್ನಾಟಕ ಸರಕಾರಿ ನೌಕರರು ಕಡ್ಡಾಯವಾಗಿ ಕರ್ನಾಟಕ ಸರಕಾರಿ ಜೀವವಿಮಾ ಇಲಾಖೆಯಿಂದ ವಿಮಾ ಪಾಲಿಸಿ(ಕೆ.ಜಿ.ಐ.ಡಿ.) ಹೊಂದಿರಬೇಕಾದದ್ದು ಸರಿಯಷ್ಟೆ. ಆದರೆ ಸರಕಾರಿ ನೌಕರರು ಹೀಗೆ ವಿಮಾ ಪಾಲಿಸಿ ಮಾಡಿಸಲು ಪ್ರಸ್ತಾವನೆ ಸಲ್ಲಿಸುವಾಗ ವೈದ್ಯಕೀಯ ಪರೀಕ್ಷೆಯ ವರದಿಯೊಂದಿಗೆ ಸಲ್ಲಿಸಬೇಕಾಗಿರುತ್ತದೆ. ಇದರಲ್ಲಿ ನೌಕರರ ಎತ್ತರ ಹಾಗೂ ತೂಕಕ್ಕೆ ಸಂಬಂಧಿಸಿದ ಮಾಹಿತಿ ಕೇಳಲಾಗಿದ್ದು ತೂಕವು ಎತ್ತರಕ್ಕೆ ಅನುಗುಣವಾಗಿ ಇಲ್ಲದಿದ್ದಲ್ಲಿ ನೌಕರರ ವಿಮೆ ಇಳಿಸಿದ ಒಟ್ಟು ಮೊತ್ತದಲ್ಲಿ ಕಡಿತವಾಗುವುದಲ್ಲದೆ ಸದರಿ ವಿಮೆಯನ್ನು ಇಳಿಮುಖ ವಿಮೆಯೆಂದು ಕರೆಯುವ ಅವೈಜ್ಞಾನಿಕ ವಿಧಾನ ಬಹಳ ಹಿಂದಿನಿಂದಲೂ ಜಾರಿಯಲ್ಲಿದೆ. ಇದರಿಂದಾಗಿ ಅಂತಹ ನೌಕರ ವಿಮಾ ಅವಧಿ ಪೂರ್ಣಗೊಂಡ ನಂತರ ಪಡೆಯುವ ಪರಿಪಕ್ವತಾಮೌಲ್ಯದಲ್ಲಿ ಬೋನಸ್ ಸೇರಿದಂತೆ ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇಂತಹ ಪದ್ಧತಿ ಬೇರಾವ ವಿಮಾ ನಿಗಮದಲ್ಲೂ ಇರುವುದಿಲ್ಲ. ಕೇವಲ ಎತ್ತರ ಹಾಗೂ ತೂಕ ಎರಡನ್ನೇ ಮಾನದಂಡವಾಗಿಟ್ಟುಕೊಂಡು ನೌಕರರು ತಮ್ಮ ಭವಿಷ್ಯದ ಉಳಿತಾಯಕ್ಕಾಗಿ ಹೂಡಿಕೆ ಮಾಡಿದ ಹಣದಲ್ಲಿ ನಷ್ಟ ಉಂಟು ಮಾಡುವ ಈ ವಿಧಾನವನ್ನು ಸರಕಾರವು ಕೈ ಬಿಡುವ ಮೂಲಕ ನೌಕರರ ಹಿತರಕ್ಷಣೆಗೆ ಮುಂದಾಗಲಿ.