ಜೋರ್ಡಾನ್‌ನಲ್ಲಿ ಜಗತ್ತಿನ ಅತಿ ಪ್ರಾಚೀನ ಬ್ರೆಡ್ ಪತ್ತೆ
ಪ್ರಪಂಚೋದ್ಯ
ಅಗ್ನಿಷ್ಟಿಕೆಯಲ್ಲಿ ಸುಟ್ಟ 14,500 ವರ್ಷಗಳ ಹಿಂದಿನ ಬ್ರೆಡ್‌ನ ಅವಶೇಷಗಳನ್ನು ಜೋರ್ಡಾನ್‌ನ ಈಶಾನ್ಯದಲ್ಲಿರುವ ನಿವೇಶನದಲ್ಲಿ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಕೃಷಿ ಅಭಿವೃದ್ಧಿಯಾಗುವು ದಕ್ಕಿಂತ ಸಾವಿರಾರು ವರ್ಷಗಳ ಹಿಂದೆ ಜನರು ಬ್ರೆಡ್ ಮಾಡುತ್ತಿದ್ದರು ಹಾಗೂ ಅದನ್ನು ಆಹಾರವಾಗಿ ಬಳಸುತ್ತಿದ್ದರು ಎಂಬುದಕ್ಕೆ ಇದು ಪುರಾವೆ ಒದಗಿಸಿದೆ ಎಂದು ಅವರು ಹೇಳಿದ್ದಾರೆ.
ಪೂರ್ವ ಮೆಡಿಟರೇನಿಯನ್‌ನ ಬೇಟೆಗಾರರು ಹಾಗೂ ಆಹಾರ ಸಂಗ್ರಹಕಾರರು ಬ್ರೆಡ್ ತಯಾರಿಸುವುದನ್ನು ಈ ಹಿಂದೆ ಪರಿಗಣಿಸಲಾದ ವರ್ಷಗಳಿಂಗಿತ ಹಿಂದೆ, ಸಸ್ಯ ಕೃಷಿ ಆರಂಭವಾಗುವುದಕ್ಕಿಂತ 4,000 ವರ್ಷಗಳ ಹಿಂದೆ ಆರಂಭಿಸಿದ್ದರು.
ಅಲೆಮಾರಿ ಜೀವನಶೈಲಿಗೆ ಬದಲಾಗಿ ಜಡ ಜೀವನ ಶೈಲಿ ಆರಂಭಿಸಿದ ನಾಟುಫಿಯಾನ್ಸ್ ಎಂದು ಕರೆಯಲಾಗುವ ಸಂಸ್ಕೃತಿಯ ಸಂದರ್ಭ ಈ ಬ್ರೆಡ್ ತಯಾರಿಸಲಾಗುತ್ತಿತ್ತು ಹಾಗೂ ಇದು ಪುರಾತತ್ವ ನಿವೇಶನವಾದ ್ಲಾಕ್ ಡೆಸರ್ಟ್‌ನಲ್ಲಿ ಕಂಡು ಬಂತು.
‘‘ಈ ನಿವೇಶನದಲ್ಲಿ ದೊರಕಿರುವ ಬ್ರೆಡ್‌ನ ಕಾಲ ಅಸಾಧಾರಣ’’ ಎಂದು ಕೋಪನ್ ಹೇಗನ್ ವಿಶ್ವವಿದ್ಯಾನಿಲಯದ ಆರ್ಕಿಯೋಬಾಟನಿಯ ಪೋಸ್ಟ್ ಡಾಕ್ಟರಲ್ ಸಂಶೋಧಕ ಹಾಗೂ ನ್ಯಾಶನಲ್ ಅಕಾಡಮಿ ಆಫ್ ಸೈನ್ಸ್‌ನ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನಾ ಲೇಖನದ ಪ್ರಮುಖ ಲೇಖಕರಾದ ಅಮೈಾ ಅರ್ರಾಝ್-ಒಟಾಗುಯಿ ಹೇಳಿದ್ದಾರೆ.
ಇದುವರೆಗೆ ಬ್ರೆಡ್‌ನ ಹುಟ್ಟು ಧಾನ್ಯ ಹಾಗೂ ಕಾಳುಗಳ ಕೃಷಿ ಮಾಡುತ್ತಿದ್ದ ಆರಂಭದ ಕೃಷಿ ಸಮಾಜದಲ್ಲಾಯಿತು ಎಂದು ಹೇಳಲಾಗಿತ್ತು. ಟರ್ಕಿಯಲ್ಲಿರುವ 9100 ವರ್ಷ ಹಳೆಯ ನಿವೇಶನದಲ್ಲಿ ಈ ಬ್ರೆಡ್‌ನ ಅವಶೇಷ ಪತ್ತೆಯಾಗಿದೆ.