ಗಾಂಜಾ ಹೊಂದಿದ ಆರೋಪ: ಓರ್ವನ ಸೆರೆ
ಉಡುಪಿ, ಜು.27: ಅಕ್ರಮವಾಗಿ ಗಾಂಜಾ ಹೊಂದಿದ್ದ ಓರ್ವನನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಜು. 26ರಂದು ಮಣಿಪಾಲ- ಪೆರಂಪಳ್ಳಿ ರಸ್ತೆಯ ಶಾಂಭವಿ ಎಂಪೈಯರ್ ಎದುರಿನ ಓಂ ಶಾಂತಿ ಮಾರ್ಗ ಎಂಬಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ಉತ್ತರ ಪ್ರದೇಶ ರಾಜ್ಯದ ಆಗ್ರಾ ಜಿಲ್ಲೆಯ ಶುಭ ಬನ್ಸಲ್ (18) ಎಂದು ಗುರುತಿಸಲಾಗಿದೆ. ಈತನಿಂದ 15,500 ರೂ. ವೌಲ್ಯದ 784 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story