ಆವರಣವಿಲ್ಲದ ಬಾವಿಗೆ ಬಿದ್ದು ವೃದ್ಧ ಮೃತ್ಯು
ಮೂಡುಬಿದಿರೆ, ಜು.30: ತೆಂಕಮಿಜಾರು ಗ್ರಾಮದ ಉಕ್ಕಿಲಾಡಿ ಎಂಬಲ್ಲಿ ಆವರಣವಿಲ್ಲದ ಬಾವಿಗೆ ಬಿದ್ದು ವೃದ್ಧರೋರ್ವರು ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಉಕ್ಕಿಲಾಡಿಯ ಚಂದ್ರಯ್ಯ ಶೆಟ್ಟಿ (78)ಎಂದು ಗುರುತಿಸಲಾಗಿದೆ. ಇವರ ಮನೆಗೆ ಸೇರಿದ ತೋಟದಲ್ಲಿ ಆವರಣವಿಲ್ಲದ ಬಾವಿಯಿದೆ. ಅದರ ಪಕ್ಕದಲ್ಲಿ ಕಾಲು ದಾರಿ ಇದೆ. ಚಂದ್ರಯ್ಯ ಶೆಟ್ಟಿ ಸೋಮವಾರ ಬೆಳಿಗ್ಗೆ ಕಾಲು ದಾರಿಯಲ್ಲಿ ನಡೆದುಕೊಂಡು ಮನೆಗೆ ಬರುತ್ತಿದ್ದಾಗ ಅಕಸ್ಮಾತ್ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟರೆನ್ನಲಾಗಿದೆ. ಅಗ್ನಿಶಾಮಕ ಸಿಬಂದಿಗಳ ನೆರವಿನಿಂದ ಶವವನ್ನು ಬಾವಿಯಿಂದ ಮೇಲಕ್ಕೆತ್ತಲಾಯಿತು. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story