ಆ. 4: ಸಹ್ಯಾದ್ರಿ ಕಾಲೇಜಿನಲ್ಲಿ ವಾಕ್- ಇನ್- ಇಂಟರ್ ವ್ಯೂ
ಮಂಗಳೂರು, ಜು.31: ಚೆನ್ನೆ ಮತ್ತು ತಾಂತ್ರಿಕ ಶಿಕ್ಷಣ ನಿರ್ದೆಶನಾಲಯ (ಬೆಂಗಳೂರು), ಕರ್ನಾಟಕ ಸರ್ಕಾರ, ಬೆಂಗಳೂರು ಹಾಗೂ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಮಂಗಳೂರು ವತಿಯಿಂದ ಇಂಜಿನಿಯರಿಂಗ್ ಪದವಿಧರರು ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಆ. 4 ರಂದು ಮಂಗಳೂರಿನ ಸಹ್ಯಾದ್ರಿ ಕಾಲೆಜ್ ಕ್ಯಾಂಪಸ್ ನಲ್ಲಿ ಕೆಂದ್ರೀಕೃತ ವಾಕ್- ಇನ್- ಇಂಟರ್ವ್ಯೆ ಆಯೋಜಿಸಲಾಗಿದೆ.
ಸಹ್ಯಾದ್ರಿ ಕಾಲೇಜಿನ ನೇಮಕಾತಿ ವಿಭಾಗದ ಡೀನ್ ಪ್ರೊ.ರಶ್ಮೀ ಭಂಡಾರಿ ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಒಟ್ಟು ಕಾರ್ಯಕ್ರಮವನ್ನು ನಿರ್ದೇಶಿಸುತ್ತಿರುವ ಬೊರ್ಡ್ ಆಫ್ ಅಪ್ರೆಂಟಿಶ್ಶಿಪ್ ಟ್ರೆನಿಂಗ್ (ಬಿಓಎಟಿ)ಚೆನ್ನೆ, ಸೌತ್ ರೀಜನ್ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆ. ಹೊಸ ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಪದವೀಧರರಿಗೆ ಪ್ರಾಯೊಗಿಕ ತರಬೇತಿ ನಿಡುವ ಉದ್ದೇಶದಿಂದ ಹಿಂದಿನ ಸರ್ಕಾರಿ ಶಿಕ್ಷಣ ಸಚಿವಾಲಯವು ‘ಪ್ರಾಕ್ಟಿಕಲ್ ಟ್ರೈನಿಂಗ್ ಸ್ಟೈಪೆಂಡರಿ ಸ್ಕಿಮ್ ಪ್ರಾರಂಭಿಸಿತು ಎಂದವರು ವಿವರಿಸಿದರು.
ಇಲ್ಲಿಯ ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ, ಬೊರ್ಡ್ ಆಫ್ ಅಪ್ರೆಂಟಿಶ್ಶಿಪ್ ಟ್ರೆನಿಂಗ್ ಕರ್ನಾಟಕ ರಾಜ್ಯದಲ್ಲಿ ಅತ್ಯಧಿಕ ಅಪ್ಪ್ರೆಂಟಿಸ್ ಟ್ರೈನೀಸ್ ಗಳು ಉದ್ಯೊಗ ಹೊಂದಲು ಸಾಧ್ಯವಾಯಿತು ಎಂದು ನಾವು ಹೆಳಲು ಸಂತೊಷಪಡುತ್ತೇವೆ ಎಂದರು.ಅಭ್ಯರ್ಥಿಗಳು 2016, 2017 ಮತ್ತು 2018 ರಲ್ಲಿ ಉತ್ತಿರ್ಣರಾದ ಪದವೀಧರ ರಾಗಿರಬೇಕು. ಅಭ್ಯರ್ಥಿಗಳಿಗೆ ನೋಂದಣಿ ಶುಲ್ಕ ಇರುವುದಿಲ್ಲ.
ಸಂದರ್ಶನಕ್ಕಾಗಿ ಅಭ್ಯರ್ಥಿಗಳು ನವೀಕರಿಸಿದ ಸಿ.ವಿ.ನ ಬಹು ಪ್ರತಿ. ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರಗಳು. ಎಲ್ಲ ಪ್ರಮಾಣಪತ್ರಗಳನ್ನು ಒಳಗೊಂಡಂತೆ ಗುರುತು ಕಾರ್ಡು ಹಾಗೂ ಅದರ ಜೆರಾಕ್ಸ್ ಪ್ರತಿಯನ್ನು ತಬೇಕು ಎಂದು ಅವರು ಹೇಳಿದರು.
ಸಂದರ್ಶನವು ಬೆಳಗ್ಗೆ 8.30ಕ್ಕೆ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೆಜ್ಮೆಂಟ್ನಲ್ಲಿ ಆರಂಭಗೊಳ್ಲಲಿದೆ. ಇಂಜಿನಿಯರಿಂಗ್/ಡಿಪ್ಲೊಮಾ ಹೊಲ್ಡರ್ಸ್ ಪದವೀಧರರು ಇದರಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು. ಗೋಷ್ಠಿಯಲ್ಲಿ ಅನುಷಾ, ಗ್ರೀಷ್ಮಾ ಉಪಸ್ಥಿತರಿದ್ದರು