ನೆಲ್ಯಾಡಿ ದಾರುರಹ್ಮಾದಲ್ಲಿ ನ್ಯೂಬೀ ಸ್ಕೂಲ್ ಉದ್ಘಾಟನೆ
ನೆಲ್ಯಾಡಿ, ಜು. 31: ಮರ್ಕಝ್ ದಾರುರ್ರಹ್ಮಾ ಇಸ್ಲಾಮಿಕ್ ಅಕಾಡಮಿಯಲ್ಲಿ ನ್ಯೂಬೀ ಖುರ್ ಆನಿಕ್ ಪ್ರೀ ಸ್ಕೂಲ್ ಅನ್ನು ಸಯ್ಯದ್ ಮನ್ಶರ್ ತಂಙಳ್ ಉದ್ಘಾಟಿಸಿದರು.
ಮುಖ್ಯ ಭಾಷಣ ಮಾಡಿ ಮಾತನಾಡಿದ ನೆಲ್ಯಾಡಿ ಕೇಂದ್ರ ಜುಮಾ ಮಸೀದಿ ಖತೀಬ್ ಅಬೂಹನ್ನತ್ ಮಹಮ್ಮದ್ ಸಖಾಫಿ ಸುನ್ನತ್ ಜಮಾಅತಿನ ಅಭಿವೃದ್ದಿಗೆ ಇಂತಹ ಸಂಸ್ಥೆಗಳ ಸೇವೆ ಬಹಳ ಉಪಯುಕ್ತವಾಗಲಿದೆ, ಮುಂದಿನ ದಿನಗಳಲ್ಲಿ ಸಂಸ್ಥೆಯು ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಂಡ ಅದ್ದುವಾಕ ಹಾಗೂ ಹಮ್ಮಬ್ಬ ಅವರಿಗೆ ಸಂಸ್ಥೆಯ ವತಿಯಿಂದ ಬೀಲ್ಕೊಡುಗೆ ನೀಡಲಾಯಿತು.
ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಬ್ರಾಹೀಂ ಎಂ.ಕೆ, ಹೊಸಮಜಲು ಮಸೀದಿ ಅಧ್ಯಕ್ಷ ಇಬ್ರಾಹಿಂ ಖಲೀಲ್, ನೆಲ್ಯಾಡಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಹಮೀದ್ ವಿ, ದಾರುರಹ್ಮಾ ಕಾರ್ಯದರ್ಶಿ ಇಸ್ಮಾಯಿಲ್ ಎನ್.ಕೆ, ಸೇರಿದಂತೆ ಹಲವಾರು ಉಪಸ್ಥಿತರಿದ್ದರು.
ಉಳಿತೊಟ್ಟು ಮಸೀದಿಯ ಖತೀಬ್ ಮಜೀದ್ ಅಹ್ಸನಿ ಸ್ವಾಗತಿಸಿ, ಆರಿಫ್ ಕೊಕ್ಕಡ ವಂದಿಸಿದರು.
Next Story