ಉಡುಪಿ: ನಗರಸಭೆಯ ವಿವಿಧ ಸೌಲಭ್ಯ ಗಳಿಗೆ ಅರ್ಜಿ ಆಹ್ವಾನ
ಉಡುಪಿ, ಜು. 31: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಾರ್ಷಿಕ 2.50 ಲಕ್ಷ ರೂ. ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿ ರುವ ಪ.ಜಾತಿ/ ಪ.ಪಂಗಡದ ಕುಟುಂಬದವರಿಗೆ, ಖಾಯಂ ಮತ್ತು ಗುತ್ತಿಗೆ ಪೌರ ಕಾರ್ಮಿಕರು ಹಾಗೂ ಅವರ ಕುಟುಂಬ ಸದಸ್ಯರಿಗೆ 2018-19ನೇ ಸಾಲಿನಲ್ಲಿ ಶೇ.24.10ರ ನಿಧಿಯಡಿ ಸೌಲಭ್ಯ ಗಳನ್ನು ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸೌಲಭ್ಯಗಳ ವಿವರ: ಮುಖ್ಯಮಂತ್ರಿ ಆರೋಗ್ಯ ವಿಮಾ ಯೋಜನೆ, ವಿದ್ಯಾರ್ಥಿ ವೇತನ ( ಎಸೆಸೆಲ್ಸಿ/ಐಟಿಐ, ದ್ವಿತೀಯ ಪಿಯುಸಿ/ಡಿಪ್ಲೋಮ/ ಪ್ಯಾರಾ ಮೆಡಿಕಲ್ ಪೂರ್ಣಗೊಳಿಸಿರಬೇಕು. ಬಿಎ,ಬಿಕಾಂ, ಬಿಎಸ್ಸಿ (2ನೇ ಅಥವಾ 3ನೇ ವರ್ಷದ ಕಲಿಯವ ವಿದ್ಯಾರ್ಥಿಗಳಿಗೆ), ಮಾಸ್ಟರ್ ಡಿಗ್ರಿ, ಎಂಎ, ಎಂಕಾಂ, ಎಂಎಸ್ಸಿ, ಬಿಇ ವಿದ್ಯಾರ್ಥಿ ಗಳಿಗೆ), ಅನಿಲ ಸಂಪಕರ್, ಸಣ್ಣ ಉದ್ದಿಮೆ, ನೀರಿನ ಸಂಪರ್ಕ.
ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ, ಪಡಿತರ ಚೀಟಿ, ಆಧಾರ್ ಕಾರ್ಡ್, ಈ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ ಪ್ರತಿ, ಅಂಕಪಟ್ಟಿಯ ದೃಢೀಕೃತ ಪ್ರತಿ (ವಿದ್ಯಾರ್ಥಿವೇತನಕ್ಕಾಗಿ), ವ್ಯಾಸಂಗ ಪ್ರಮಾಣ ಪತ್ರದ ಮೂಲ ಪ್ರತಿ (ವಿದ್ಯಾರ್ಥಿ ವೇತನಕ್ಕೆ), ಸಮಾಜ ಕಲ್ಯಾಣ ಇಲಾಖೆ ಯಿಂದ ವಿದ್ಯಾರ್ಥಿವೇತನ ಪಡೆಯದೇ ಇರುವ ಬಗ್ಗೆ ದೃಢೀಕರಣ ಪತ್ರ, ಈ ದಾಖಲೆಗಳನ್ನು ಸಲ್ಲಿಸಬೇಕು.
ಆಸಕ್ತ ಅರ್ಜಿದಾರರು ನೇರವಾಗಿ ಸಂಬಂಧಪಟ್ಟ ವಿಷಯ ನಿರ್ವಾಹಕರಾದ ನಯನ ಂಡಾರ್ಕರ್ ಅವರಿಗೆ ಆ.20ರೊಳಗೆ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ ಮಾಹಿತಿಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ನಗರಸಭೆಯ ಪೌರಾಯುಕ್ತರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.