ಮೂಡುಶೆಡ್ಡೆ ದನಕಳ್ಳತನ ಪ್ರಕರಣ: ಮತ್ತೋರ್ವ ಆರೋಪಿ ಸೆರೆ
ಮಂಗಳೂರು, ಜು.31: ಮೂಡುಶೆಡ್ಡೆಬೈಲು ಮನೆಯ ಹಟ್ಟಿಯಿಂದ ಎರಡು ದನಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಜ್ಪೆ ಕೊಲ್ಚಾರ್ ನಿವಾಸಿ ನಿಸಾರುದ್ದೀನ್ ಯಾನೆ ನಿಸಾರ್ ಪಾರಿವಾಳ (23) ಬಂಧಿತ ಆರೋಪಿ. ಈತನ ವಿರುದ್ಧ ಈ ಹಿಂದೆ ಬಜಪೆ ಪೊಲೀಸ್ ಠಾಣೆಯಲ್ಲಿ ಕಳವು, ಮನೆ ಕಳ್ಳತನ ಹಾಗೂ ದನ ಕಳ್ಳತನ ಹೀಗೆ ಒಟ್ಟು 4 ಪ್ರಕರಣ ದಾಖಲಾಗಿದೆ.
ಪ್ರಕರಣ ವಿವರ: ಜೂ.16, 17ರಂದು ಬೆಳಗ್ಗೆ 3:30ರ ಸುಮಾರಿಗೆ ಮೂಡುಶೆಡ್ಡೆಬೈಲು ನಿವಾಸಿ ಪುರುಷೋತ್ತಮ ಎಂಬವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ ದನಗಳನ್ನು ಆರೋಪಿಗಳು ಬಿಳಿಬಣ್ಣದ ಟಾಟಾ ಸುಮೋದಲ್ಲಿ 2 ದನಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪೈಕಿ ಇಮ್ರಾನ್ ಯಾನೆ ಕುಟ್ಟ ಇಮ್ರಾನ್, ಉಮರ್ ಫಾರೂಕ್ ಎಂಬವರನ್ನು ಈಗಾಗಲೇ ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ ಅವರಿಂದ ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಶಾಂತಾರಾಮ, ಪಿಎಸ್ಸೈಗಳಾದ ಶ್ಯಾಮ್ ಸುಂದರ್ ಎಚ್.ಎಂ. ಮತ್ತು ಎಚ್.ಡಿ. ಕಬ್ಬಾಳ್ರಾಜ್, ಸಿಬ್ಬಂದಿ ಭಾಗವಹಿಸಿದ್ದರು.