ಬ್ಯಾಂಕ್ನಲ್ಲಿ ಮನಪಾ ನೀರಿನ ಶುಲ್ಕ ಪಾವತಿಗೆ ಅವಕಾಶ
ಮಂಗಳೂರು, ಆ.1: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬಳಕೆದಾರರಿಗೆ ನೀರಿನ ಶುಲ್ಕ ಪಾವತಿಗೆ ಅನುಕೂಲವಾಗುವಂತೆ ನಗರಪಾಲಿಕೆ ವ್ಯಾಪ್ತಿಯ ಕೆನರಾ ಬ್ಯಾಂಕ್ನ 32 ಶಾಖೆಗಳಲ್ಲಿ ಹಾಗೂ ಕಾರ್ಪೊರೇಶನ್ ಬ್ಯಾಂಕ್ನ 27 ಶಾಖೆ ಹಾಗೂ ಮಂಗಳೂರು ಒನ್ನ ಎಲ್ಲಾ ಕೇಂದ್ರಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮನಪಾ ಪ್ರಕಟನೆಯಲ್ಲಿ ತಿಳಿಸಿದೆ.
ಯಾವುದೇ ಗ್ರಾಹಕರಿಗೆ ಈ ತನಕ ಬಿಲ್ ಜಾರಿಯಾಗದಿದ್ದಲ್ಲಿ ಮನಪಾ ಅಧಿಕಾರಿಗಳಾದ ವಾರ್ಡ್ 1 ರಿಂದ 6 - ಅಬ್ದುಲ್ ಖಾದರ್ ಮೊ.ಸಂ: 9448216005, ವಾರ್ಡ್ 7ರಿಂದ 12 ಹಾಗೂ 60 ಕೃಷ್ಣ ಮೂರ್ತಿ ರೆಡ್ಡಿ - 9741635737, ವಾರ್ಡ್ 13ರಿಂದ 19 -ಲತಾ 9741490412, ವಾರ್ಡ್ 20ರಿಂದ 24 -ಪದ್ಮಾ 7619537104, ವಾರ್ಡ್ 25 ರಿಂದ 33 -ಅಮಿತಾ 9535640851, ವಾರ್ಡ್ 34 ರಿಂದ 36 -ಸುವರ್ಣ 9845415965, ವಾರ್ಡ್ 37ರಿಂದ 41 -ದೀಕ್ಷಾ 9632455841, ವಾರ್ಡ್ 42ರಿಂದ 48- ಯಶವಂತ ಪ್ರಭು 9743412642, ವಾರ್ಡ್ 49ರಿಂದ 54 - ಸಹನಾ ಮಹದೇವ ನಾಯ್ಕ್ 8792370644, ವಾರ್ಡ್ 55ರಿಂದ 59 - ರೂಪ ಶಿವಯ್ಯನ ಮಠ 9986057271 ಇವರನ್ನು ಸಂಪರ್ಕಿಸಬಹುದಾಗಿದೆ.
ಬಳಕೆದಾರರು ನೀರಿನ ಶುಲ್ಕದ ಬಗ್ಗೆ ಮಾಹಿತಿಗಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರರು ನೀರು ಸರಬರಾಜು ಇವರನ್ನು ಸಂಪರ್ಕಿಸಲು ಮನಪಾ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.