ಬಂಟ್ವಾಳ ಪುರಸಭೆಯ ಮೀಸಲಾತಿ ಪಟ್ಟಿ ಪ್ರಕಟ
ಬಂಟ್ವಾಳ, ಆ. 2: ಬಂಟ್ವಾಳ ಪುರಸಭಾ ವ್ಯಾಪ್ತಿಯ 27 ವಾರ್ಡ್ಗಳ ಮೀಸಲಾತಿ ಪಟ್ಟಿಯನ್ನು ಕರ್ನಾಟಕ ಪುರಸಭೆ ಕಾಯಿದೆ ಅನ್ವಯ ಹಾಗೂ ಸರಕಾರದ ಅಧಿಸೂಚನೆ ಅನ್ವಯ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಎನ್.ಬಾಗಲವಾಡೆ ಪ್ರಕಟಿಸಿ ಆದೇಶಿಸಿದ್ದಾರೆ.
ಈ ಮೊದಲು ಬಂಟ್ವಾಳ ಪುರಭೆಯಲ್ಲಿ 23 ವಾರ್ಡ್ಗಳಿದ್ದು, ಜನಸಂಖ್ಯೆಯ ಆಧಾರದ ಮೇಲೆ 4 ವಾರ್ಡ್ಗಳನ್ನು ಹೆಚ್ಚುವರಿ ಮಾಡಿದ್ದು, ಇದೀಗ ಪುರಸಭೆಯ ವಾರ್ಡ್ಗಳ ಸಂಖ್ಯೆ 27ಕ್ಕೇರಿದೆ.
ವಾರ್ಡ್ವಾರು ಮೀಸಲಾತಿ: ಬಂಟ್ವಾಳ ಕಸ್ಬಾ
ವಾರ್ಡ್ 1-ಹಿಂದುಳಿದ ವರ್ಗ(ಎ), ವಾರ್ಡ್ 2-ಸಾಮಾನ್ಯ, ವಾರ್ಡ್ 3- ಹಿಂದುಳಿದ ವರ್ಗ(ಬಿ) ಮಹಿಳೆ, ವಾರ್ಡ್ 4-ಸಾಮಾನ್ಯ ಮಹಿಳೆ, ವಾರ್ಡ್ 5-ಪರಿಶಿಷ್ಟ ಜಾತಿ, ವಾರ್ಡ್ 6-ಸಾಮಾನ್ಯ ಮಹಿಳೆ, ವಾರ್ಡ್ 7-ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 8-ಹಿಂದುಳಿದ ವರ್ಗ(ಎ).
ಬಂಟ್ವಾಳ ಬಿಮೂಡ:
ವಾರ್ಡ್ 9-ಹಿಂದುಳಿದ ವರ್ಗ (ಎ), ವಾರ್ಡ್ 10-ಸಾಮಾನ್ಯ ಮಹಿಳೆ, ವಾರ್ಡ್ 11-ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 12-ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 13-ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ್ 14-ಸಾಮಾನ್ಯ ಮಹಿಳೆ, ವಾರ್ಡ್ 15-ಸಾಮಾನ್ಯ, ವಾರ್ಡ್ 16-ಹಿಂದುಳಿದ ವರ್ಗ(ಎ), ವಾರ್ಡ್ 17-ಸಾಮಾನ್ಯ, ವಾರ್ಡ್ 18-ಸಾಮಾನ್ಯ, ವಾರ್ಡ್ 19-ಹಿಂದುಳಿದ ವರ್ಗ(ಎ), ವಾರ್ಡ್ 20-ಸಾಮಾನ್ಯ, ವಾರ್ಡ್ 21-ಹಿಂದುಳಿದ ವರ್ಗ(ಬಿ), ವಾರ್ಡ್ 22-ಸಾಮಾನ್ಯ ಮಹಿಳೆ.
ಪಾಣೆಮಂಗಳೂರು:
ವಾರ್ಡ್ 23-ಸಾಮಾನ್ಯ, ವಾರ್ಡ್ 24-ಸಾಮಾನ್ಯ, ವಾರ್ಡ್ 25-ಸಾಮಾನ್ಯ ಮಹಿಳೆ, ವಾರ್ಡ್ 26-ಸಾಮಾನ್ಯ ಮಹಿಳೆ, ವಾರ್ಡ್ 27-ಪರಿಶಿಷ್ಟ ಪಂಗಡ.
ಬಂಟ್ವಾಳ ಪುರಸಭಾ ವ್ಯಾಪ್ತಿಯ 27 ವಾರ್ಡ್ಗಳಲ್ಲಿ 12 ವಾರ್ಡ್ಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ. ಈಗಾಗಲೇ 105 ಸ್ಥಳೀಯ ಸಂಸ್ಥೆಗಳ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಆ. 29ರಂದು ಚುನಾವಣೆ ನಡೆಯಲಿದ್ದು, ಸೆ. 1ಕ್ಕೆ ಫಲಿತಾಂಶ ಪ್ರಕಟವಾಗಲಿದೆ.