ಹದಗೆಟ್ಟ ಕೊಂಬಗುಡ್ಡೆ ಮಸೀದಿ ರಸ್ತೆ ಸರಿಪಡಿಸಲು ಆಗ್ರಹ
ಕಾಪು, ಆ. 2: ಕಾಪು ಪುರಸಭೆ ವ್ಯಾಪ್ತಿಯ ಮಲ್ಲಾರಿನ ಕೊಂಬಗುಡ್ಡೆಯ ಜಾಮಿಯಾ ಮಸ್ಜಿದ್ ರಸ್ತೆ ತೀರಾ ಹದಗೆಟ್ಟಿದ್ದು, ಸರಿಪಡಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಭಾಗದಲ್ಲಿ 60ರಿಂದ 70ರಷ್ಟು ಮನೆಗಳು ಇವೆ. ರಾಜ್ಯ ಹೆದ್ದಾರಿಯಿಂದ 300 ಮೀಟರ್ನಷ್ಟು ಇರುವ ರಸ್ತೆ ಡಾಮಾರು ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ಕಾಣಿಸಿಕೊಂಡಿದ್ದು, ಹಲವು ವರ್ಷಗಳ ಹಿಂದೆ ಹಾಕಲಾದ ಡಾಮಾರು ಕಿತ್ತು ಹೋಗಿದೆ. ದ್ವಿಚಕ್ರವಾಹ, ಆಟೋ ರಿಕ್ಷಾ, ಕಾರು ಜೀಪು ವಾಹನಗಳು ರೆಸ್ತೆ ನಾದುರಸ್ತಿಯಿಂದ ಸಂಚರಿಸಲು ಶ್ರಮಪಡಬೇಕಾಗಿದೆ.
ಈ ರಸ್ತೆಯನ್ನು ಸರಿಪಡಿಸಬೇಕು ಎಂದು ಹಲವು ಭಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಆದಷ್ಟು ಬೇಗ ಈ ರಸ್ತೆಯನ್ನು ಸರಿಪಡಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಬಗ್ಗೆ ಕಳೆದ ವಾರ ಪುರಸಭೆಗೆ ಮುಖ್ಯಾಧಿಕಾರಿ ರಾಯಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಅನ್ವರ್ ಆಲಿ ಕಾಪು, ಈ ಭಾಗದ ಜನರೂ ತೆರಿಗೆ ಪಾವತಿಸುತ್ತಾರೆ. ಆದರೆ ಕೆಲವೊಂದು ನೆಪಗಳನ್ನು ಒಡ್ಡಿ ರಸ್ತೆ ದುರಸ್ಥಿಗೊಳಿಸುತಿಲ್ಲ. ಈ ರಸ್ತೆಯ ಮುಂದಿನ ಭಾಗವನ್ನು ಕಾಂಕ್ರೀಟ್ಗೊಳಿಸಿ ಅಭಿವೃದಿ ಪಡಿಸಲಾಗಿದೆ. ಕೂಡಲೇ ಈ ರಸ್ತೆಯನ್ನು ದುರಸ್ಥಿ ಪಡಿಸದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.