ಉಪನೋಂದಣಿ ಕಚೇರಿ: ಪರಿಸ್ಕೃತ ಮಾರುಕಟ್ಟೆ ಮೌಲ್ಯ ಪ್ರಕಟ
ಬೆಳ್ತಂಗಡಿ,ಆ.3: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಬೆಳ್ತಂಗಡಿ ಉಪನೋಂದಣಿ ಕಚೇರಿ ವ್ಯಾಪ್ತಿಯಲ್ಲಿ 2018-19ನೇ ಸಾಲಿನ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯವನ್ನು ಪರಿಷ್ಕಸಲಾಗಿದ್ದು ಬೆಳ್ತಂಗಡಿ ಉಪನೋಂದಣಿ ಕಚೇರಿಯಪ್ರಕಟನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಪ್ರಭಾರ ಉಪನೋಂದಣಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.
ಆಕ್ಷೇಪಣೆ ಮತ್ತು ಅಹವಾಲು ಇದ್ದರೆ ಮೌಲ್ಯಮಾಪನ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಹಾಗೂ ಕಾರ್ಯದರ್ಶಿಗಳಾದ ಉಪನೋಂದಣಾಧಿಕಾರಿಗಳಿಗೆ 15 ದಿನದೊಳಗೆ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story