ನನ್ನ ಅಪ್ಪನೇ ನನ್ನ ಬೆಸ್ಟ್ ಫ್ರೆಂಡ್ : ಆಶಿಕ್ ಕುಕ್ಕಾಜೆ
ಫ್ರೆಂಡ್ ಶಿಪ್ ದಿನಾಚರಣೆ ವಿಶೇಷ
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?
ನನ್ನ ಬೆಸ್ಟ್ ಫ್ರೆಂಡ್ ಹೆಸರು ಅಬೂಬಕರ್.
ನನ್ನ ಫ್ರೆಂಡ್ಸ್ ಅನೇಕ ಜನರಿದ್ದರೂ ಕೊನೆಗೂ ನನ್ನ ತೀರ್ಮಾನ ‘ನನ್ನ ಅಪ್ಪನೇ ನನ್ನ ಬೆಸ್ಟ್ ಫ್ರೆಂಡ್ ’ ಎಂದಾಗಿದೆ.
► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?
ನಾನು ತಾಯಿಯ ಗರ್ಭದಿಂದ ಭೂಮಿಗೆ ಬಂದ ದಿನದಿಂದಲೇ ನನ್ನ ಬೆಸ್ಟ್ ಫ್ರೆಂಡ್ ಭೇಟಿಯಾಗಿದ್ದೇನೆ.
► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?
ಮೊದಲ ಕೆಲವು ವರ್ಷಗಳಲ್ಲಿ ಅಪ್ಪನ ಮಹತ್ವ ತಿಳಿದಿರದ ನನಗೆ ಬುದ್ಧಿ ಬಂದ ಮೇಲೆ ನನ್ನ ಅಪ್ಪ ನನ್ನ ಬೆಸ್ಟ್ ಫ್ರೆಂಡ್ ಆಗಿದ್ದಾರೆ.
► ಆ ಬೆಸ್ಟ್ ಫ್ರೆಂಡ್ ನಲ್ಲಿ ನೀವು ಅತ್ಯಂತ ಹೆಚ್ಚು ಇಷ್ಟಪಡುವ ಗುಣಗಳೇನು ?
ನನ್ನ ಬೆಸ್ಟ್ ಫ್ರೆಂಡ್ ನಲ್ಲಿ ಇರುವ ಗುಣಗಳೆಲ್ಲಾ ನನಗೆ ಇಷ್ಟವಾಗಿದೆ. ಮನುಷ್ಯನು ಹೇಗೆ ಜೀವಿಸಬೇಕು, ಆತನ ಕರ್ತವ್ಯಗಳೇನು ಎಂಬ ಕುರಿತು ನನಗೆ ಬಾಲ್ಯದಿಂದಲೇ ಹೇಳಿಕೊಟ್ಟ ನನ್ನ ಅಪ್ಪನ ಎಲ್ಲಾ ಗುಣಗಳು ನನಗೆ ಇಷ್ಟವಾಗಿವೆ .
► ನಿಮ್ಮ ಬೆಸ್ಟ್ ಫ್ರೆಂಡ್ ನಿಮಗೆ ಸಿಟ್ಟು ಬರಿಸುವುದು ಯಾವಾಗ ?
ಸಿಟ್ಟು ಬರಿಸಿಲ್ಲ ಇಷ್ಟರತನಕ. ಆದರೆ ಕೆಲವೊಮ್ಮೆ ನಾನೇ ಸಿಟ್ಟಾಗಿದ್ದು ಇದೆ. ನಂತರ ನನ್ನ ಬೆಸ್ಟ್ ಫ್ರೆಂಡ್ ಅಪ್ಪನ ಪ್ರೀತಿ, ಮಹತ್ವ ಮನವರಿಕೆಯಾಗಿ ಪಶ್ಚಾತ್ತಾಪ ಪಟ್ಟಿದ್ದೇನೆ.
► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ?
ಮನುಷ್ಯನ ಧರ್ಮವನ್ನು ನೋಡದೇ ಮನುಷ್ಯತ್ವದಿಂದ ಕಾಣುವುದು, ಎಲ್ಲಾ ಧರ್ಮೀಯರನ್ನೂ ಒಡ ಹುಟ್ಟಿದವರೆಂದು ತಿಳಿದು ಜೀವಿಸುವುದು, ಇತರರಿಗೆ ನಮ್ಮ ಕೈಯಲ್ಲಾದ ಸಹಾಯ ಮಾಡುವುದು ಇವುಗಳು ನನ್ನ ಮತ್ತು ನನ್ನ ಬೆಸ್ಟ್ ಫ್ರೆಂಡ್ ನಡುವಿನ ಸಾಮ್ಯತೆಗಳಾಗಿವೆ.
► ನಿಮ್ಮ ನಡುವಿನ ವಿರೋಧಾಭಾಸಗಳು ?
ಕೆಲವೊಮ್ಮೆ ನಾನು ಕಾರಾಣಾಂತರದಿಂದ ರಾತ್ರಿ ಮನೆ ತಲುಪುವುದು ತಡವಾದಲ್ಲಿ ಅದನ್ನು ವಿರೋಧಿಸುತ್ತಾರೆ ನನ್ನ ಬೆಸ್ಟ್ ಫ್ರೆಂಡ್
► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ?
ಜಗಳ ನಡೆದಿಲ್ಲ . ಆದರೆ ಒಂದು ಭಾರಿ ಏನೋ ಆವೇಶದಿಂದ ಎದುರುತ್ತರ ಕೊಟ್ಟಿದ್ದೇನೆ. ಅದರಿಂದಾಗಿ ಅವರು ಮಾನಸಿಕವಾಗಿ ಬಹಳ ನೊಂದಿದ್ದರು. ನಂತರ ನನಗೂ ಅದರ ಪಶ್ಚಾತ್ತಾಪ ಆಗಿದೆ.
► ಮೊದಲು ರಾಜಿ ಆದದ್ಯಾರು ?
ಮೊದಲು ರಾಜಿಯಾದದ್ದು ಅವರೇ. " ಹಾಗೆಲ್ಲ ಮಾಡಬಾರದು ಮಗನೇ" ಎಂದು ನನ್ನ ಬಳಿ ಬಂದು ಸಮಾಧಾನ ಪಡಿಸುತ್ತಿದ್ದರು.
► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ?
ಫ್ರೆಂಡ್ ಶಿಪ್ ಎಂದರೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಗೆಳೆಯರಾಗಿ ಜೀವಿಸುವುದು. ಆದರೆ ಈ ಫ್ರೆಂಡ್ ಶಿಪ್ ಗೆ ಮೂರನೇ ವ್ಯಕ್ತಿಯೇ ಆಗಬೇಕೆಂದಿಲ್ಲ ಎಂಬುವುದು ನನ್ನ ಅಭಿಪ್ರಾಯ.
► ನಿಮ್ಮ ಪ್ರಕಾರ ಬೆಸ್ಟ್ ಫ್ರೆಂಡ್ ಹೇಗಿರಬೇಕು ?
ಬೆಸ್ಟ್ ಫ್ರೆಂಡ್ ಅಂದ್ರೆ ಸುಖ ದುಃಖ ಎರಡನ್ನೂ ಜೊತೆಯಾಗಿ ಹಂಚಿಕೊಳ್ಳುವುದು. ಕಷ್ಟಕಾಲದಲ್ಲಿ ಪರಸ್ಪರರಿಗೆ ನೆರವಾಗುವುದು.
► ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ ? ಹೌದು ಎಂದಾದರೆ ಏಕೆ ?
ನನ್ನ ಬೆಸ್ಟ್ ಫ್ರೆಂಡ್ ನಲ್ಲಿರುವ ಎಲ್ಲಾ ಗುಣಗಳು ನನಗೆ ಕರಗತವಾಗಿಲ್ಲ ಎಂಬ ಅಸೂಯೆ ಇದೆ. ಅವರ ಬದುಕಿನ ರೀತಿ ನೀತಿಗಳನ್ನು ನೋಡಿ ಹೊಟ್ಟೆಕಿಚ್ಚು ಪಟ್ಟಿದ್ದೇನೆ.
► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ?
ಇನ್ನೂ ಕೂಡ ನನಗೆ ಬೆಸ್ಟ್ ಫ್ರೆಂಡ್ ಗಳು ಇದ್ದಾರೆ. ಅದರಲ್ಲಿ ಎಸ್.ಎ. ರಹಿಮಾನ್ ಮಿತ್ತೂರು, ಇಕ್ಬಾಲ್ ಕುಕ್ಕಾಜೆ, ಶರೀಫ್ ಕುಕ್ಕಾಜೆ, ಬಶೀರ್ ಕುಕ್ಕಾಜೆ, ಬಶೀರ್ ಅಬುದಾಬಿ, ಮಜೀದ್ ಕುಕ್ಕಾಜೆ ಇವರನ್ನೂ ಕೂಡ ಬಹಳ ಮಿಸ್ ಮಾಡ್ಕೊಳ್ತಾ ಇದ್ದೇನೆ.