ರಾಜ್ಯ ವಕ್ಫ್ ಮಂಡಳಿಯ ಮತದಾರರ ಪಟ್ಟಿ ರಚನೆಗೆ ಅಧಿಸೂಚನೆ
ಮಂಗಳೂರು, ಆ.3: ಕರ್ನಾಟಕ ವಕ್ಫ್ ಮಂಡಳಿಯ ನಾಲ್ಕು ಮತ ಕ್ಷೇತ್ರಗಳಿಗೆ ಮತದಾರರ ಪಟ್ಟಿ ತಯಾರಿಸಲು ಅಧಿಸೂಚನೆ ಹೊರಡಿಸಿದೆ.
ರಾಜ್ಯದ ಲೋಕಸಭೆ, ರಾಜ್ಯಸಭೆಯ ಮುಸ್ಲಿಂ ಸದಸ್ಯರು, ರಾಜ್ಯದ ವಿಧಾನಸಭೆ, ವಿಧಾನಪರಿಷತ್ನ ಮುಸ್ಲಿಂ ಸದಸ್ಯರು, ಕರ್ನಾಟಕ ಬಾರ್ ಕೌನ್ಸಿಲ್ನ ಮುಸ್ಲಿಂ ಸದಸ್ಯರು, 1 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚು ವಾರ್ಷಿಕ ಆದಾಯವುಳ್ಳ ವಕ್ಫ್ ಮುತವಲ್ಲಿಗಳು, ರಾಜ್ಯದ ಲೋಕಸಭೆ, ರಾಜ್ಯಸಭೆಯ ಮಾಜಿ ಮುಸ್ಲಿಂ ಸದಸ್ಯರು, ರಾಜ್ಯದ ವಿಧಾನಸಭೆ, ವಿಧಾನಪರಿಷತ್ನ ಮಾಜಿ ಮುಸ್ಲಿಂ ಸದಸ್ಯರು, ರಾಜ್ಯ ಬಾರ್ ಕೌನ್ಸಿಲ್ನ ಮಾಜಿ ಮುಸ್ಲಿಂ ಸದಸ್ಯರು ತಮ್ಮನ್ನು ಮತದಾರರಾಗಿ ನೋಂದಾಯಿಸಿಕೊಳ್ಳಲು ಅವಕಾಶವಿದೆ.
ಅರ್ಜಿ ಸಲ್ಲಿಸಲು ಆಗಸ್ಟ್ 9 ಕೊನೆಯ ದಿನವಾಗಿರುತ್ತದೆ. ಸೆಪ್ಟಂಬರ್ 10ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಹಕ್ಕು ಮತ್ತು ಆಕ್ಷೇಪಣೆ ಗಳಿಗೆ ಸೆಪ್ಟಂಬರ್ 11ರಿಂದ 25ರವರೆಗೆ ಕಾಲಾವಕಾಶವಿದೆ.ಅಕ್ಟೋಬರ್ 17ರಂದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story