ರಾಜ್ಯ ಮಟ್ಟದ ಪುರುಷರು, ಮಹಿಳೆಯರ ಗುಡ್ಡಕಾಡು ಓಟ: ಆಳ್ವಾಸ್ ಚಾಂಪಿಯನ್
ಮೂಡುಬಿದಿರೆ, ಆ.3: ಮಂಡ್ಯ ಮೆಡಿಕಲ್ಕಾಲೇಜಿನಲ್ಲಿ ನಡೆದ ರಾಜೀವ್ಗಾಂಧಿ ಆರೋಗ್ಯ ವಿ.ವಿಯ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಗುಡ್ಡಕಾಡು ಓಟದಲ್ಲಿ ಆಳ್ವಾಸ್ ಕಾಲೇಜಿನ ಪುರುಷ ಮತ್ತು ಮಹಿಳೆಯರ ಗುಡ್ಡಕಾಡು ಓಟದ ತಂಡ ಚಾಂಪಿಯನ್ ಆಗಿ ಮೂಡಿ ಬಂದಿದೆ.
ಪುರುಷರ ವಿಭಾಗದಲ್ಲಿ ಸಮೀರ್ ಸಾವಂತ್ ಪ್ರಥಮ, ಕಯಾಮ್ ಶೇಕ್ ದ್ವಿತೀಯ, ನಿಯಾಸ್ ಚತುರ್ಥ ಮತ್ತು ಜಿತಿನ್ ಎಸ್ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಸುಪ್ರಿತಾ ಪ್ರಥಮ, ನಿಖಿತ ದ್ವಿತೀಯ ಮತ್ತು ಪೂಜಾ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ. ಪುರುಷರ ಮತ್ತು ಮಹಿಳೆಯರು ತಂಡ ಪ್ರಶಸ್ತಿಯನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿರುತ್ತಾರೆ.
ಈ ಏಳು ಜನ ಕ್ರೀಡಾಪಟುಗಳು ಅಂತರ್ ವಿವಿ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ ಎಂ.ಮೋಹನ ಆಳ್ವರವರು ಅಭಿನಂದನೆ ಸಲ್ಲಿಸಿರುತ್ತಾರೆ.
Next Story