'ಬ್ಯಾರಿ ನಿಖಾಃ ಹೆಲ್ಪ್ ಲೈನ್' ಮಹಿಳಾ ಘಟಕಕ್ಕೆ ಚಾಲನೆ
ಮಂಗಳೂರು, ಆ. 4: ಬ್ಯಾರಿ ನಿಖಾಃ ಹೆಲ್ಪ್ ಲೈನ್ ನ ಲೇಡೀಸ್ ವಿಂಗ್ ( ಮಹಿಳಾ ಘಟಕ ) ಈಗಾಗಲೇ ಚಾಲ್ತಿಯಲ್ಲಿದ್ದು, ಅಧ್ಯಕ್ಷೆಯಾಗಿ ಇಸ್ಲಾಮಿಕ್ ತರ್ಬೀಯಾ ಶಿಕ್ಷಣ ಸಂಸ್ಥೆ ಮಂಗಳೂರು ಇದರ ಪ್ರಾಂಶುಪಾಲರಾದ ಶಹನಾಝ್ ಅಹ್ಮದ್ ಆಯ್ಕೆಯಾಗಿದ್ದಾರೆ.
ಸಮುದಾಯದ ಹಿತಚಿಂತನೆಯೊಂದಿಗೆ ಹಲವಾರು ಸತ್ಪ್ರಯೋಜಕ ಯೋಜನೆಗಳ ಬಗ್ಗೆ ತಂಡವು ಚರ್ಚಿಸಿ, ನಿರ್ಣಯ ಕೈಗೊಂಡಿದ್ದು, ಮಹಿಳಾ ಘಟಕವು ಮುಂದಿನ ದಿನಗಳಲ್ಲಿ ಈ ಎಲ್ಲಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸಲಿದೆ. ವರದಕ್ಷಿಣೆ ನಿರ್ಮೂಲನೆ, ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡುವುದು, ವಿವಾಹದ ಮೊದಲು ಮತ್ತು ನಂತರದ ಅನಾವಶ್ಯಕ ಕಾರ್ಯಕ್ರಮಗಳನ್ನು ತೊಡೆದು ಹಾಕುವುದು ಮುಂತಾದ ವಿಷಯಗಳಲ್ಲಿ ಸ್ತ್ರೀ ಪಾತ್ರವು ಗಮನಾರ್ಹವಾಗಿದ್ದು ಬ್ಯಾರಿ ನಿಖಾಃ ಹೆಲ್ಪ್ ಲೈನ್ ನ ಮಹಿಳಾ ಘಟಕವು ಈ ಎಲ್ಲಾ ವಿಷಯದ ಬಗ್ಗೆ ಮಾಹಿತಿ ವಿನಿಮಯ ಕಾರ್ಯಾಗಾರ ನಡೆಸಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story