ಕಾಪು: 'ಜಮೀಯ್ಯತುಲ್ ಫಲಾಹ್' ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನ
ಕಾಪು, ಆ. 4: ಜಮೀಯ್ಯತುಲ್ ಫಲಾಹ್ ಕಾಪು ಘಟಕದ ವತಿಯಿಂದ ಕಾಪು ತಾಲೂಕು ವ್ಯಾಪ್ತಿಯ ಬಡ ಕುಟುಂಬದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಲಿಖಿತ ಅರ್ಜಿ ಆಹ್ವಾನಿಸಲಾಗಿದೆ.
ಝಕಾತ್ ಪಡೆಯಲು ಅರ್ಹರಾಗಿರುವ ಪ್ರಥಮ ಪಿಯುಸಿ ಮತ್ತು ಪ್ರಥಮ ಪದವಿ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಲಿಖಿತ ಅರ್ಜಿಯನ್ನು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಆ. 14ರೊಳಗೆ ಜಮೀಯ್ಯತುಲ್ ಫಲಾಹ್, ಕಾಪು ಘಟಕ, ನಂ. 5, ಮೊದಲನೇ ಮಹಡಿ, ಸಿಟಿ ಸೆಂಟರ್, ಮಾರಿಗುಡಿ ರಸ್ತೆ, ಕಾಪು-574106 ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 9901596303 ಅಥವಾ 9449030751 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದೆಂದು ಪ್ರಕಟನೆ ತಿಳಿಸಿದೆ.
Next Story