ಎಟಿಎಂ ಪಾಸ್ ವರ್ಡ್ ಕೂಡ ಹಂಚಿಕೊಳ್ಳುವ ಗೆಳೆತನ ನಮ್ಮದು: ಇರ್ಶಾದ್
ಫ್ರೆಂಡ್ ಶಿಪ್ ದಿನಾಚರಣೆ ವಿಶೇಷ
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?
ಇಕ್ಬಾಲ್ ಮತ್ತು ಆರೀಫ್ ನನ್ನ ಬೆಸ್ಟ್ ಫ್ರೆಂಡ್ಸ್
► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?
ಪಾಣೆಮಂಗಳೂರಿನ ದಾರುಲ್ ಇಸ್ಲಾಂ ಶಾಲೆಯಲ್ಲಿರುವಾಗ ನಮ್ಮ ಮೊದಲ ಭೇಟಿಯಾಯಿತು.
► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?
ಶಾಲೆಯಲ್ಲಿರುವಾಗ ಅವರು ನನ್ನೊಂದಿಗೆ ಬೆರೆಯುತ್ತಿದ್ದ ರೀತಿಯಿಂದ ಬೆಸ್ಟ್ ಫ್ರೆಂಡ್ ಆದರು.
► ಆ ಬೆಸ್ಟ್ ಫ್ರೆಂಡ್ ನಲ್ಲಿ ನೀವು ಅತ್ಯಂತ ಹೆಚ್ಚು ಇಷ್ಟಪಡುವ ಗುಣಗಳೇನು ?
ನನಗೆ ಯಾವುದೇ ರೀತಿಯ ಸಮಸ್ಯೆಗಳಾದರೂ ಮುಂದೆ ನಿಂತು ಧೈರ್ಯ ತುಂಬುವ ಜೊತೆಗೆ ಸಹಾಯ ಮಾಡುತ್ತಾರೆ.
► ನಿಮ್ಮ ಬೆಸ್ಟ್ ಫ್ರೆಂಡ್ ನಿಮಗೆ ಸಿಟ್ಟು ಬರಿಸುವುದು ಯಾವಾಗ ?
ಪ್ರವಾಸ ಹೋಗುವುದಾಗಿ ಹೇಳಿ ಸಿದ್ಧತೆ ನಡೆಸಿದ ಬಳಿಕ ಕೈಕೊಟ್ಟಾಗ ಸಿಟ್ಟು ಬರುತ್ತದೆ.
► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ?
ನಮ್ಮೆಲ್ಲರಿಗೂ ಫಾಸ್ಟ್ ಫುಡ್ ಅಚ್ಚುಮೆಚ್ಚಿನ ತಿನಿಸು.
► ನಿಮ್ಮ ನಡುವಿನ ವಿರೋಧಾಭಾಸಗಳು ?
ವಿರೋಧಾಭಾಸಗಳೇನೂ ಇಲ್ಲ.
► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ?
ತಮಾಷೆಗಾಗಿ ನಡೆಯುತ್ತೆ ಅಷ್ಟೆ.
► ಮೊದಲು ರಾಜಿ ಆದದ್ಯಾರು ?
ಯಾರು ಕೋಪ ಮಾಡಿಕೊಳ್ಳುತ್ತಾರೋ ಅವರೇ ಮೊದಲು ರಾಜಿಯಾಗಬೇಕು. ಇದು ನಮ್ಮ ಪಾಲಿಸಿ
► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ?
ಮೂವರಲ್ಲಿ ಯಾವುದೇ ಕಷ್ಟ–ಸುಖಗಳಿದ್ದರೂ ಹಂಚಿಕೊಂಡು ಜೀವನದ ಕೊನೆಯವರೆಗೂ ಒಗ್ಗಟ್ಟಿನಲ್ಲಿರಬೇಕು.
► ನಿಮ್ಮ ಪ್ರಕಾರ ಬೆಸ್ಟ್ ಫ್ರೆಂಡ್ ಹೇಗಿರಬೇಕು ?
ದಾರಿ ತಪ್ಪುವಾಗ ಸರಿಪಡಿಸಿ, ಕೆಟ್ಟ ಚಟಗಳಿಗೆ ಹೋಗುವಾಗ ಬುದ್ಧಿವಾದ ಹೇಳುವ ಯೋಗ್ಯತೆ ಇರಬೇಕು. ಎಲ್ಲಾ ಸಮಯದಲ್ಲೂ ಕೈಜೋಡಿಸುವ ಗುಣ ಹೊಂದಿರಬೇಕು.
► ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ ? ಹೌದು ಎಂದಾದರೆ ಏಕೆ ?
ಇಲ್ಲ.
► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ?
ನನಗೆ ಸಾವಿರಾರು ಫ್ರೆಂಡ್ ಇದ್ದಾರೆ. ಆದರೆ ಅವರಲ್ಲಿ ಇವರಿಬ್ಬರಷ್ಟೇ ನನ್ನ ಬೆಸ್ಟ್ ಫ್ರೆಂಡ್ಸ್ .
ನಮ್ಮ ಸ್ನೇಹಕ್ಕೆ ತುಂಬಾ ವಿಶೇಷತೆಗಳಿವೆ. ನಾವು ಮೂರು ಮಂದಿಯೂ ಹತ್ತಿರದ ಊರಿನವರು. ಯಾವುದೇ ಕಾರ್ಯಕ್ರಮವಿದ್ದರೂ ಒಟ್ಟಿಗೇ ಹೋಗುತ್ತೇವೆ. ನಮ್ಮಲ್ಲಿ ಒಬ್ಬ ಬರಲು ಸಾಧ್ಯವಾಗದಿದ್ದರೂ ಆ ಕಾರ್ಯಕ್ರಮಕ್ಕೆ ನಾವು ಹೋಗುವುದಿಲ್ಲ. ನಮ್ಮ ನಡುವೆ ಯಾವುದೇ ಮುಚ್ಚುಮರೆ ಇಲ್ಲ, ಎಲ್ಲಾ ವಿಚಾರಗಳನ್ನೂ ಹಂಚಿಕೊಳ್ಳುತ್ತೇವೆ. ನಮ್ಮೆಲ್ಲರ ಬ್ಯಾಂಕ್ ಖಾತೆಯ ವಿವರಗಳು, ಎಟಿಎಂ ನ ಪಾಸ್ ವರ್ಡ್ ಗಳೂ ಎಲ್ಲರ ಬಳಿ ಇದೆ. ಇದು ನಮ್ಮೊಳಗಿನ ಸ್ನೇಹ, ನಂಬಿಕೆಯ ಪ್ರತೀಕ.