ಕೊಡೆಯ ಮೂಲಕ ಚಿಗುರಿದ ನಮ್ಮ ಸ್ನೇಹಕ್ಕೆ 10 ವರ್ಷ: ನಿಶಾ ರಝಾಕ್
ಫ್ರೆಂಡ್ ಶಿಪ್ ದಿನಾಚರಣೆ ವಿಶೇಷ
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?
ನಿಶಾನ ನನ್ನ ಪ್ರಾಣ ಸ್ನೇಹಿತೆ
► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?
ಶಾಲೆಯಲ್ಲಿ 8 ತರಗತಿಯಲ್ಲಿ 5 - 6-2008ರಂದು ನಮ್ಮ ಮೊದಲ ಭೇಟಿಯಾಯಿತು.
► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?
ಒಂದು ದಿನ ಮಳೆಗಾಲದಲ್ಲಿ ನಾನು ಕೊಡೆ ಮರೆತು ಶಾಲೆಗೆ ಹೋಗಿದ್ದೆ. ಶಾಲೆ ಬಿಟ್ಟ ನಂತರ ಜೋರು ಮಳೆ ಬರುತ್ತಿತ್ತು. ನಿಶಾ ಅವಳ ಕೊಡೆ ನನಗೆ ಕೊಟ್ಟು, ಬೇರೆಯವರ ಕೊಡೆಯಲ್ಲಿ ಮನೆಗೆ ಹೋದಳು. ಆ ದಿನದಿಂದ ನಮ್ಮ ಗೆಳೆತನ ಆರಂಭವಾಗಿತ್ತು.
► ಆ ಬೆಸ್ಟ್ ಫ್ರೆಂಡ್ ನಲ್ಲಿ ನೀವು ಅತ್ಯಂತ ಹೆಚ್ಚು ಇಷ್ಟಪಡುವ ಗುಣಗಳೇನು ?
ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುವ ಅವಳ ಗುಣ ನನಗೆ ಇಷ್ಟ ಆಗಿತ್ತು.
► ನಿಮ್ಮ ಬೆಸ್ಟ್ ಫ್ರೆಂಡ್ ನಿಮಗೆ ಸಿಟ್ಟು ಬರಿಸುವುದು ಯಾವಾಗ ?
ನನಗೆ ಇಷ್ಟವಿಲ್ಲದ ವಿಷಯವನ್ನು ನನಗೆ ಹೇಳುವುದು.
► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ?
ಶವರ್ಮಾ ನಮ್ಮ ಫೇವರಿಟ್ ತಿಂಡಿ.
► ನಿಮ್ಮ ನಡುವಿನ ವಿರೋಧಾಭಾಸಗಳು ?
ಏನೂ ಇಲ್ಲ.
► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ?
ಜಗಳ ನಡೆದಿತ್ತು. ಸಣ್ಣಪುಟ್ಟ ವಿಷಯದಲ್ಲಿ.
► ಮೊದಲು ರಾಜಿ ಆದದ್ಯಾರು ?
ನಿಶಾ ಮೃದು ಸ್ವಭಾವದವಳು. ಆದ್ದರಿಂದ ಅವಳೇ ಮೊದಲು ರಾಜಿಯಾಗುತ್ತಿದ್ದಳು.
► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ?
ಕಷ್ಟ- ಸುಖದ ಎಲ್ಲಾ ಸಂದರ್ಭಗಳಲ್ಲೂ ಸ್ನೇಹಿತರ ಜೊತೆ ಇರುವುದೇ ನಿಜವಾದ ಫ್ರೆಂಡ್ ಶಿಪ್. ಸ್ನೇಹಿತರ ಮಧ್ಯೆ ಯಾವುದೇ ವಿಷಯದಲ್ಲಿ ಮುಚ್ಚುಮರೆ ಇರಬಾರದು. ಫ್ರೆಂಡ್ ಶಿಪ್ ನಲ್ಲಿ ವಿಶ್ವಾಸ ಗಟ್ಟಿಯಾಗಿರಬೇಕು. ಎಲ್ಲಾ ವಿಷಯಗಳನ್ನು ಹಂಚಿಕೊಳ್ಳಬೇಕು. ಗೆಳೆತನಕ್ಕೆ ನಂಬಿಕೆ, ಪ್ರೀತಿ, ವಿಶ್ವಾಸಗಳೇ ಬುನಾದಿ.
► ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ ? ಹೌದು ಎಂದಾದರೆ ಏಕೆ ?
ಹೌದು. ನಿಶಾ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಾಗ ಹೊಟ್ಟೆ ಕಿಚ್ಚು ಆಗುತ್ತಿತ್ತು.
► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ ?
ನಿಶಾಳ ಹೊರತು ನನ್ನ ಮನಸ್ಸು ನಿಖರವಾಗಿ ಒಪ್ಪಿಕೊಳ್ಳುವ ಸ್ನೇಹಿತೆ ಮತ್ತೊಬ್ಬರಿಲ್ಲ.
ಈ ವರ್ಷ ನಮ್ಮ ಸ್ನೇಹಕ್ಕೆ 10 ವರ್ಷವಾಯಿತು. ಆದರೂ ನಮ್ಮ ಸ್ನೇಹದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ನಾವು ಪ್ರತೀ ದಿನ 1 ಗಂಟೆ ಮಾತನಾಡುತ್ತಿರುತ್ತೇವೆ. ಅದನ್ನೂ ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಲು ಇಷ್ಟವಿಲ್ಲ. ನಾವು ಶಾಲೆ ಮತ್ತು ಕಾಲೇಜು ಬಿಟ್ಟು 5 ವರ್ಷ ಗಳಾದರೂ ನಮ್ಮ ಗೆಳೆತನ ಇಂದಿಗೂ ಶಾಶ್ವತವಾಗಿದೆ.
ನನಗೆ ನನ್ನ ಜೀವನದ ಎಲ್ಲಾ ವಿಷಯಗಳನ್ನು ನಿಶಾಳಲ್ಲಿ ಹಂಚಿಕೊಳ್ಳದಿದ್ದರೆ ಸಮಾಧಾನವೇ ಇರುವುದಿಲ್ಲ. ನನ್ನ ಜೀವನದಲ್ಲಿ ಆಕೆ ಎಂದೆಂದಿಗೂ ಹೀಗೆಯೇ ಇರಬೇಕು ಎಂಬುದು ನನ್ನ ಬಯಕೆ.
ನಿಶಾ ರಝಾಕ್, ಪಡೀಲ್, ಮಂಗಳೂರು