ನಮ್ಮದು Art 4 Heart ಸ್ನೇಹ: ನಾಸಿರ್ ಬ್ರಹ್ಮಾವರ
ಫ್ರೆಂಡ್ ಶಿಪ್ ದಿನಾಚರಣೆ ವಿಶೇಷ
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?
ಸಚಿನ್, ರಾಜೇಶ್ ಮತ್ತು ಪ್ರಮೋದ್ ನನ್ನ ಬೆಸ್ಟ್ ಫ್ರೆಂಡ್ಸ್. ನಮ್ಮದು Art 4 Heart ಸ್ನೇಹ.
► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?
ನಮ್ಮ ಊರಿನ ಪ್ರಾಥಮಿಕ ಶಾಲೆಯಲ್ಲಿ 2-3 ನೇ ತರಗತಿಯಲ್ಲಿ ಕಲಿಯುತ್ತಿರುವ ಸಂದರ್ಭದಿಂದಲೂ ನಾವು ಚಡ್ಡಿದೋಸ್ತಿಗಳು. ನಮ್ಮ ಗೆಳೆತನ ಸುಮಾರು 23 ವರ್ಷಗಳದ್ದು.
► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?
ನಮ್ಮ ವೈಯಕ್ತಿಕ ಭಾವನೆ, ವಿಚಾರಧಾರೆಗಳು ಸಮಾನವಾಗಿವೆ. ಆದ್ದರಿಂದ ಬೆಸ್ಟ್ ಫ್ರೆಂಡ್ಸ್ ಗಳಾಗಿದ್ದೇವೆ.
► ಆ ಬೆಸ್ಟ್ ಫ್ರೆಂಡ್ ನಲ್ಲಿ ನೀವು ಅತ್ಯಂತ ಹೆಚ್ಚು ಇಷ್ಟಪಡುವ ಗುಣಗಳೇನು ?
ನಮ್ಮಲ್ಲಿರುವ ಕೆಲವು ವಿಶೇಷ ಸಾಮ್ಯತೆಗಳೆಂದರೆ ಬಾಲ್ಯದಿಂದ ಇಂದಿನ ವರೆಗೂ ಒಟ್ಟುಗೂಡಿ ದೂರ ಪ್ರಯಾಣ, ಕ್ರೀಡೆಗಳು, ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತೇವೆ.
► ನಿಮ್ಮ ನಡುವಿನ ವಿರೋಧಾಭಾಸಗಳು ?
ನನ್ನ ಅರಿವಿಗೆ ಬಂದಂತೆ ನಮ್ಮ ನಡುವೆ ಯಾವುದೇ ವಿರೋಧಾಭಾಸಗಳಿಲ್ಲ.
► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ?
ಒಂದು ಬಾರಿ ಬಾಲ್ಯದಲ್ಲಿ ತಮಾಷೆ ಮಾಡಿದ್ದಕ್ಕಾಗಿ ಗೆಳೆಯನಲ್ಲಿ ಸಿಟ್ಟು ಮಾಡಿಕೊಂಡಿದ್ದೆ. ಬಳಿ ಕ ಕೆಲವೇ ಕ್ಷಣಗಳಲ್ಲಿ ಇನ್ನೊಬ್ಬ ಸ್ನೇಹಿತ ರಾಜಿ ಮಾಡಿಸಿದ. ಆ ಬಳಿಕದ 23 ವರ್ಷಗಳಲ್ಲಿ ಸಿಟ್ಟು, ವೈಮನಸ್ಸು ಯಾರಲ್ಲೂ ಆಗಿಲ್ಲ.
► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ?
ಗೆಳೆತನದಲ್ಲಿ ಜಾತಿ, ಧರ್ಮ, ಮತ-ಪಂಗಡ, ಬಡವ- ಧನಿಕನೆಂಬ ಬೇಧ ಇರಬಾರದು. ಗೆಳೆಯರ ಕಷ್ಟ-ದುಃಖಗಳನ್ನು ಹಂಚಿಕೊಳ್ಳುವಂತಿರಬೇಕು. ಸ್ನೇಹಿತರ ಭಾವನೆಗಳನ್ನು ತಕ್ಷಣ ಅರ್ಥೈಸುವಂತಹ ಹೃದಯವಂತಿಕೆ ಇರುವವರೇ ನಿಜವಾದ ಗೆಳೆಯರು.
► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ?
ನನ್ನ ಹಲವಾರು ಗೆಳೆಯರಲ್ಲಿ, ಈ ಮೂರು ಗೆಳೆಯರನ್ನು ಅತೀ ಹೆಚ್ಚು ಇಷ್ಟ ಪಡುತ್ತೇನೆ. ಮೂವರು ಸ್ನೇಹಿತರಲ್ಲಿ ರಾಜೇಶ್ ಊರಿನಲ್ಲಿದ್ದರೆ, ಸಚಿನ್ ಮತ್ತು ಪ್ರಮೋದ್ ಹೊರದೇಶದಲ್ಲಿ ಉದ್ಯೋಗದಲ್ಲಿ ಇದ್ದಾರೆ. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.
- ನಾಸಿರ್, ಬ್ರಹ್ಮಾವರ