ವಿಶ್ವದ ಅತ್ಯಂತ ಎತ್ತರದ ಪ್ರದೇಶದಲ್ಲಿ ಬೈಕ್ ರೈಡ್ ಮಾಡಿ ಸಾಹಸ ಮೆರೆದ ಮುಂಬೈ ಕನ್ನಡತಿ ಕನಕಾ
ಮುಂಬೈ, ಅ.4: ಮುಂಬೈ ಕನ್ನಡತಿ ಕನಕಾ ಶೆಟ್ಟಿ ಮೋಟಾರು ವಾಹನ ಚಲಾಯಿಸಬಹುದಾದ ವಿಶ್ವದ ಅತ್ಯಂತ ಎತ್ತರದ ಪ್ರದೇಶ ಲೇ-ಲಡಾಕ್ ಖಾರ್ಡೊಂಗ್ಲಾಕ್ಕೆ ಬೈಕ್ ರೈಡ್ನಲ್ಲಿ ತಲುಪಿ ವಯಸ್ಸಿಗೆ ಮೀರಿದ ಸಾಹಸ ಮೆರೆದಿದ್ದಾರೆ.
ಮುಂಬೈ ಮಹಾನಗರದ ಬಾಂದ್ರಾದ ಎಂ.ಎಂ.ಕೆ. ಕಾಲೇಜಿನ ದ್ವಿತೀಯ ವರ್ಷದ ಬಿಬಿಎ ವಿದ್ಯಾರ್ಥಿನಿಯಾಗಿರುವ ಕನಕಾ ಮತ್ತವರ ತಂಡ ಇತ್ತೀಚೆಗೆ ಲೇ-ಲಡಾಕ್ ಖಾರ್ಡೊಂಗ್ಲಾದ 18,380 ಅಡಿ ಎತ್ತರವನ್ನು 15 ದಿನಗಳೊಳಗೆ 6,010 ಕಿಲೋ ಮೀಟರ್ ದೂರವನ್ನು 140 ಗಂಟೆಗಳಲ್ಲಿ ಕ್ರಮಿಸಿದೆ. ಕನಕಾ ತನ್ನ ಎಳೆಯ ಪ್ರಾಯದಲ್ಲೇ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಈಕೆ 2010ರಲ್ಲಿ ನಡೆದ ಥಾಣೆ ಜಿಲ್ಲಾ ಮಟ್ಟದ ಮಿಕ್ಸ್ ಮಾರ್ಷಲ್ ಆರ್ಟ್ಸ್(ಕಿಕ್ ಬಾಕ್ಸಿಂಗ್)ಎರಡು ಚಿನ್ನ ಹಾಗೂ 2018ರಲ್ಲಿ ಮತ್ತೊಂದು ಚಿನ್ನದ ಪದಕ ಜಯಿಸಿದ್ದರು.
ಕಿಕ್ ಬಾಕ್ಸಿಂಗ್ ಜೊತೆಗೆ ಬೈಕ್ ರೈಡಿಂಗ್ನಲ್ಲಿ ಹೆಚ್ಚಿನ ಆಸಕ್ತಿಯಿರುವ ಕನಕಾ ಶೆಟ್ಟಿ ಮುಂಬೈನ ಹೊಟೇಲ್ ಉದ್ಯಮಿ ರಾಜೇಶ್ ಬಿ.ಶೆಟ್ಟಿ ಹಾಗೂ ಡಾ.ರೇಖಾ ಆರ್.ಶೆಟ್ಟಿ ದಂಪತಿಯ ಪುತ್ರಿ.