ಜೋಕಟ್ಟೆ: ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ಗೆ ಆಯ್ಕೆ
ಮಂಗಳೂರು, ಆ.4: ಜೋಕಟ್ಟೆಯ ಮುಹಿಯ್ಯುದ್ದೀನ್ ಹೊಸ ಜುಮಾ ಮಸೀದಿ, ನೂರಾನಿಯಾ ಜಮಾಅತ್ ಕಮಿಟಿಯ ಮಹಾಸಭೆಯು ಇತ್ತೀಚೆಗೆ ನೂರಾನಿಯ ಮದ್ರಸ ಸಭಾಂಗಣದಲ್ಲಿ ಹಾಜಿ ಅಬ್ದುಲ್ ರಝಾಕ್ ನಾರ್ವೆ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
2018-19ನೆ ಸಾಲಿನ ಅಧ್ಯಕ್ಷರಾಗಿ ಹಾಜಿ ಅಬ್ದುಲ್ ರಝಾಕ್ ನಾರ್ವೆ, ಉಪಾಧ್ಯಕ್ಷರಾಗಿ ಹಾಜಿ ಹುಸೈನ್ ಮಾಶಿತ, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಸಿದ್ದೀಕ್, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ರೆಹ್ಮಾನ್ ಮನೆಗಾರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮುಜೀಬುರ್ರಹ್ಮಾನ್, ಕೋಶಾಧಿಕಾರಿಯಾಗಿ ಹಾಜಿ ಮುಹಮ್ಮದ್ ಶರೀಫ್ ಎಂ.ಎಸ್., ಲೆಕ್ಕಪರಿಶೋಧಕರಾಗಿ ಎಚ್.ಎಂ.ಬಾವ, ಮದ್ರಸ ಮೇಲ್ವಿಚಾರಕರಾಗಿ ಹಾಜಿ ಎಂ.ಎ. ಅಬ್ದುರ್ರಹ್ಮಾನ್ ಹಾಗೂ ಟಿ.ಮುಹಮ್ಮದ್ ಆಯ್ಕೆಯಾದರು.
Next Story