ಜಗಳವಾದ ಮೇಲೆ ಒಂದು ಗಂಟೆ ಮಾತನಾಡದೆ ಕೂತೆವು: ಚಾಂದಿನಿ
ಫ್ರೆಂಡ್ ಶಿಪ್ ದಿನಾಚರಣೆ ವಿಶೇಷ
ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?
ನನ್ನ ಬೆಸ್ಟ್ ಫ್ರೆಂಡ್ ಲತಾ
ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?
ನಾನು ಅವಳನ್ನು 2009ರಲ್ಲಿ, ಪದವಿ ಪೂರ್ವ ಕಾಲೇಜಿನಲ್ಲಿ ಮೊದಲ ಬಾರಿ ಭೇಟಿಯಾದೆ.
ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?
ಕಾಲೇಜಿನ ದಿನಗಳಲ್ಲಿ ನಾವಿಬ್ಬರೂ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆವು. ನಾವಿಬ್ಬರೂ ಮನೆಯಿಂದ ಬುತ್ತಿ ತರುತ್ತಿದ್ದೆವು. ವಿಶೇಷವೆಂದರೆ ನಮ್ಮಿಬ್ಬರ ಬುತ್ತಿಯಲ್ಲಿ ಒಂದೇ ತರಹದ ತಿಂಡಿ ಇರುತ್ತಿತ್ತು. ಅವಳು ದೋಸೆ ತಂದರೆ ನನಗೂ ಅಂದು ದೋಸೆನೆ ಆಗಿರುತ್ತಿತ್ತು, ಸಜ್ಜಿಗೆ ತಂದರೆ ನನಗೂ ಸಜ್ಜಿಗೆ ಇರುತ್ತಿತ್ತು. ಹೀಗೆ ನಮ್ಮಲ್ಲಿ ಗೆಳೆತನ ಬೆಳೆಯಿತು.
ಆ ಬೆಸ್ಟ್ ಫ್ರೆಂಡ್ ನಲ್ಲಿ ನೀವು ಅತ್ಯಂತ ಹೆಚ್ಚು ಇಷ್ಟಪಡುವ ಗುಣಗಳೇನು ?
ನನಗೆ ಅವಳಲ್ಲಿ ಇಷ್ಟವಾಗುವ ಗುಣವೆಂದರೆ ಕಾಳಜಿ, ನನಗೆ ಏನಾದರು ನೋವಾದರೆ ಅವಳೂ ಅಳುತ್ತಾಳೆ ಮತ್ತು ನನ್ನನ್ನು ಸಂತೈಸುತ್ತಾಳೆ.
ನಿಮ್ಮ ಬೆಸ್ಟ್ ಫ್ರೆಂಡ್ ನಿಮಗೆ ಸಿಟ್ಟು ಬರಿಸುವುದು ಯಾವಾಗ ?
ತಮಾಷೆ ಮಾಡಿದರೆ ನನಗೆ ಹೆಚ್ಚು ಸಿಟ್ಟು ಬರುತ್ತೆ ಎಂದು ಅವಳಿಗೆ ಗೊತ್ತಿತ್ತು. ಹಾಗಾಗಿ ನನಗೆ ಸಿಟ್ಟು ಬರಲೆಂದೇ ಆಕೆ ಆಗಾಗ ನನ್ನನ್ನು ತಮಾಷೆ ಮಾಡಿ ನಗುತ್ತಿದ್ದಳು...
ನಿಮ್ಮ ನಡುವಿನ ವಿರೋಧಾಭಾಸಗಳು ?
ನನಗೆ ಅವಳ ಮೇಲೆ ಸಿಟ್ಟು ಬರುತ್ತಿತ್ತು.
► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ?
ಸಾಮ್ಯತೆಗಳೆಂದರೆ, ಮೆಲೋಡಿ ಹಾಡು, ಬಿರಿಯಾನಿ, ಗೋಡಂಬಿಯ ಪೇಡಗಳು ನಮ್ಮ ಫೇವರೆಟ್.
ನಿಮ್ಮ ನಡುವಿನ ವಿರೋಧಾಭಾಸಗಳು ?
ವಿರೋಧಭಾಸಗಳೆಂದರೆ, ಅವಳು ಸೆನ್ಸಿಟಿವ್-ನಾನು ಇಲ್ಲ, ಅವಳಿಗೆ ಧೈರ್ಯ ಕಮ್ಮಿ ನನಗೆ ಹೆದರಿಕೆ ಇಲ್ಲ.
ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ?
ಒಂದು ಬಾರಿ ಜಗಳ ನಡೆದಿದೆ. ದೊಡ್ಡ ಜಗಳವೇನಲ್ಲಾ. ಒಂದು ಗಂಟೆ ಮಾತನಾಡಿಲ್ಲ.ಅದು ಊಟದ ವಿಷಯದಲ್ಲಿ ನಡೆದ ಜಗಳ. ಒಂದು ಗಂಟೆಯ ನಂತರಮಾತನಾಡಲು ಪ್ರಾರಂಭಿಸಿದೆವು, ಅದೇ ನಮ್ಮಮೊದಲ ಮತ್ತು ಕೊನೆಯ ಜಗಳ.
ಮೊದಲು ರಾಜಿ ಆದದ್ಯಾರು ?
ಜಗಳ ಮಾಡಿದಾಗ ಮೊದಲು ರಾಜಿಯಾಗಿದ್ದು ನಾನು
ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ?
ಬೆಸ್ಟ್ ಫ್ರೆಂಡ್ ಅಂದ್ರೆ ಇಬ್ಬರೂ ಒಂದೇ ಮನೋಭಾವ ಇರಬೇಕೆಂದಿಲ್ಲಾ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರಾಯಿತು.
ನಿಮ್ಮ ಪ್ರಕಾರ ಬೆಸ್ಟ್ ಫ್ರೆಂಡ್ ಹೇಗಿರಬೇಕು ?
ಫ್ರೆಂಡ್ಸ್ ಗಳ ಮಧ್ಯೆ ಶರತ್ತುಗಳಿರಬಾರದು ಫ್ರೆಂಡ್ ಕೆಟ್ಟ ದಾರಿ ಹಿಡಿಯದಂತೆ ನೋಡಿಕೊಳ್ಳಬೇಕು. ಇಬ್ಬರೂ ಪರಸ್ಪರ ಅರ್ಥಮಾಡಿಕೊಂಡು ಸಹಬಾಳ್ವೆ ನಡೆಸಬೇಕು. ಕಷ್ಟಕ್ಕೆ ಸ್ಪಂದಿಸಬೇಕು. ಜಗಳವಾಡಿ ಸಂಬಂಧ ಕಳೆದುಕೊಳ್ಳಬಾರದು.
ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ ? ಹೌದು ಎಂದಾದರೆ ಏಕೆ ?
ನನ್ನ ಬೆಸ್ಟ್ ಫ್ರೆಂಡ್ ಮೇಲೆ ನನಗೆ ಈವರೆಗೂ ಹೊಟ್ಟೆಕಿಚ್ಚಾಗಿಲ್ಲ. ಅವಳ ಸಂತೋಷದಲ್ಲಿ ನನಗೂ ಪಾಲು ಇರುತ್ತೆ. ಯಾರಿಗಾದರೂ ಒಬ್ಬರಿಗೆ ಸಿಕ್ಕ ಸಂತೋಷವನ್ನು ಇಬ್ಬರೂ ಹಂಚಿಕೊಳ್ಳುತ್ತೇವೆ.
ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ ?
ನಾನು ಲತಾಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾವಿಬ್ಬರು ಭೇಟಿಯಾಗದೆ ಅದೆಷ್ಟೋ ವರ್ಷಗಳು ಕಳೆದವು.
- ಚಾಂದಿನಿ, ಎಂಪಸಿಸ್ ಉದ್ಯೋಗಿ, ಮಂಗಳೂರು