ಆ ವಿಷಯದಲ್ಲಿ ನನ್ನದೇ ತಪ್ಪಿತ್ತು. ನಾನೇ ರಾಜಿಯಾದೆ: ಮಹಾಂತೇಶ ಜಾಂಗಟಿ
ಫ್ರೆಂಡ್ ಶಿಪ್ ದಿನಾಚರಣೆ ವಿಶೇಷ
► ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?
ನನ್ನ ಬೆಸ್ಟ್ ಫ್ರೆಂಡ್ ಸುರೇಖಾ ಮಾಳಗಿ
► ಎಲ್ಲಿ, ಯಾವಾಗ ಅವರನ್ನು ಭೇಟಿಯಾದ್ರಿ ?
ಒಂದು ಕಾರ್ಯಕ್ರಮದ ನಿಮಿತ್ತ ಅವರ ಊರಿಗೆ ಹೋದಾಗ ನಾವಿಬ್ಬರು ಮೊದಲು ಭೇಟಿಯಾಗಿದ್ದೆವು. ನಂತರ ನಮ್ಮಿಬ್ಬರ ಮಧ್ಯೆ ಆತ್ಮೀಯತೆ ಬೆಳೆಯಿತು. ಮೊಬೈಲ್ ನಲ್ಲಿ ಪ್ರತೀ ದಿನದ ಮಾತು, ಹರಟೆ, ಪರಸ್ಪರರ ನೋವು, ನಲಿವುಗಳನ್ನು ಹಂಚಿಕೊಳ್ಳುತ್ತಾ ಇಬ್ಬರ ಸ್ನೇಹ ಅನ್ಯೋನ್ಯವಾಯಿತು.
► ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?
ಅವಳು ತುಂಬಾ ಸೂಕ್ಷ್ಮ, ಮುಗ್ಧ ಮನಸ್ಸಿನವಳು. ನಡೆ, ನುಡಿ, ಅವಳ ನಗು, ಜಾಣತನ, ಸ್ನೇಹಪೂರ್ವಕ ವ್ಯಕ್ತಿತ್ವ ನನಗೆ ತುಂಬಾ ಇಷ್ಟವಾಗುತ್ತದೆ.
► ನಿಮ್ಮ ಬೆಸ್ಟ್ ಫ್ರೆಂಡ್ ನಿಮಗೆ ಸಿಟ್ಟು ಬರಿಸುವುದು ಯಾವಾಗ ?
ಅವಳು ಯಾವುದಾದರು ವಿಷಯಕ್ಕೆ ತಲೆ ಕೆಡಿಸಿ ಚಿಂತೆ ಮಾಡುವಾಗ, ಏನಾದರೂ ಹೇಳಿದರೆ ಬೇಗನೆ ಕೋಪ ಮಾಡಿಕೊಳ್ಳುವ ಸಂದರ್ಭ ನನಗೆ ಸಿಟ್ಟು ಬರುತ್ತದೆ.
► ನಿಮ್ಮ ನಡುವಿನ ಸಾಮ್ಯತೆಗಳು (ಫೇವರಿಟ್ ನಟ, ಆಹಾರ, ಕ್ರಿಕೆಟಿಗ ಇತ್ಯಾದಿ ) ?
ಅವಳ ಆಲೋಚನೆಗಳು ನನ್ನ ಆಲೋಚನೆ ಒಂದೇ ಆಗಿರುತ್ತದೆ. ಬಹುತೇಕ ಇಬ್ಬರ ಅಭಿರುಚಿ ಒಂದೇ ಇದೆ. ಪರಸ್ಪರರಿಗೆ ಗೌರವಿಸುತ್ತೇವೆ.
► ನಿಮ್ಮ ನಡುವಿನ ವಿರೋಧಾಭಾಸಗಳು ?
ಅವಳು ಪ್ರತಿಯೊಂದು ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾಳೆ. ಆದರೆ ನಾನು ಎಲ್ಲ ವಿಷಯಗಳನ್ನು ಹಗುರವಾಗಿ ಪರಿಗಣಿಸುತ್ತೇನೆ. ಅವಳು ಆಚಾರ, ವಿಚಾರ, ದೇವರ ಮೇಲೆ ಅಪಾರ ನಂಬಿಕೆ ಹೊಂದಿದ್ದಾಳೆ. ನಾನು ಅಷ್ಟಾಗಿ ನಂಬಿಕೆ ಹೊಂದಿಲ್ಲ.
► ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ ?
ಒಂದು ದಿನ ನಾವಿಬ್ಬರು ಒಟ್ಟಿಗೆ ಒಂದು ಕಾರ್ಯಕ್ರಮಕ್ಕೆ ಹೋಗಲು ನಿರ್ಧರಿಸಿದ್ದೆವು. ಒಂದು ಸ್ಥಳದಲ್ಲಿ ಇಬ್ಬರು ಭೇಟಿಯಾಗಿ ಹೊರಡಲು ತೀರ್ಮಾನಿಸಿದ್ದೆವು. ಆದರೆ ನಾನು ಯಾವುದೋ ಕಾರಣದಿಂದ ನಿರ್ಧರಿಸಿದ್ದ ಸ್ಥಳಕ್ಕೆ ಮೂರು ಗಂಟೆ ತಡವಾಗಿ ಬಂದಿದ್ದೆ. ಮೂರು ಗಂಟೆಗಳ ಕಾಲ ಅವಳು ನನಗಾಗಿ ಕಾಯುತ್ತಾ ಅಲ್ಲಿಯೇ ನಿಂತಿದ್ದಳು. ಇದರಿಂದ ಇಬ್ಬರ ಮಧ್ಯೆ ಜಗಳವಾಗಿತ್ತು.
► ಮೊದಲು ರಾಜಿ ಆದದ್ಯಾರು ?
ಈ ವಿಷಯದಲ್ಲಿ ನನ್ನದೇ ತಪ್ಪು ಇದ್ದಿದ್ದರಿಂದ ನಾನೇ ರಾಜಿಯಾಗಬೇಕಾಯಿತು. ಅವಳು ಅಂದು ಅತ್ತು ಕೆಲವು ಗಂಟೆಗಳ ವರೆಗೆ ನನ್ನೊಡನೆ ಮಾತನಾಡಿರಲಿಲ್ಲ. ಕಾರ್ಯಕ್ರಮಕ್ಕೆ ಇಬ್ಬರು ಜೊತೆಗೆ ಹೋಗಿ ವಾಪಸ್ ಬಂದರೂ ಕೂಡ ಇಬ್ಬರ ನಡುವೆ ಮಾತುಕತೆಯೇ ಇರಲಿಲ್ಲ. ನಂತರ ನಾನೇ ಕ್ಷಮಾಪಣೆ ಕೇಳಿ ಸಮಾಧಾನಪಡಿಸಿದೆ.
► ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು ?
ನನ್ನ ಪ್ರಕಾರ ಪರಸ್ಪರರ ಭಾವನೆಗಳನ್ನು ಅರ್ಥೈಸಿಕೊಳ್ಳುವುದು. ಪರಸ್ಪರ ಗೌರವಿಸುವುದು, ಪರಸ್ಪರರ ಸುಖ-ದುಃಖ, ಕಷ್ಟ-ನಷ್ಟದಲ್ಲಿ ಭಾಗಿಯಾಗುವುದೇ ನಿಜವಾದ ಗೆಳೆತನ.
► ನಿಮ್ಮ ಪ್ರಕಾರ ಬೆಸ್ಟ್ ಫ್ರೆಂಡ್ ಹೇಗಿರಬೇಕು ?
ಸ್ನೇಹಿತನ ನೋವು, ನಲಿವುಗಳಿಗೆ ಸ್ಪಂದಿಸುವವರು, ಸ್ನೇಹಿತನಿಗೆ ಉತ್ತಮ ಮಾರ್ಗದಲ್ಲಿ ನಡೆಯುವಂತೆ ಸಲಹೆ ನೀಡುವವರು, ಕಷ್ಟದ ಸಂದರ್ಭದಲ್ಲಿಯೂ ಸ್ನೇಹಿತನ ಬೆನ್ನಿಗೆ ನಿಲ್ಲುವವರೆ ನಿಜವಾದ ಬೆಸ್ಟ್ ಫ್ರೆಂಡ್. ಸ್ನೇಹಿತನಿಗೆ ಅಣ್ಣ, ತಂಗಿ, ತಂದೆ, ತಾಯಿ, ಗುರುವಿನ ಪ್ರೀತಿ ತೋರುವವರು, ಅವರ ಸ್ಥಾನದಲ್ಲಿ ನಿಂತು ಬುದ್ದಿ ಹೇಳುವವರು, ಜವಾಬ್ದಾರಿ ತಿಳಿಸಿಕೊಡುವವರು ನಿಜವಾದ ಬೆಸ್ಟ್ ಫ್ರೆಂಡ್.
► ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ ? ಹೌದು ಎಂದಾದರೆ ಏಕೆ ?
ಅವಳ ಮೇಲೆ ನನಗೆ ಎಂದಿಗೂ ಹೊಟ್ಟೆಕಿಚ್ಚಾಗಿಲ್ಲ. ಇಬ್ಬರ ನಡುವೆ ಪ್ರತಿದಿನ ಹರಟೆ, ತಮಾಷೆ, ಕೋಪ, ಮುನಿಸು ಇರುತ್ತದೆ. ಅನೇಕ ಬಾರಿ ಮಾತು ಬಿಡುವ ನಿರ್ಧಾರ ಮಾಡುತ್ತೇವೆ. ಆದರೆ, ಮರುಕ್ಷಣವೇ ಮತ್ತೆ ಮಾತನಾಡತೊಡಗುತ್ತೇವೆ.
► ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ?
ನನ್ನ ಆತ್ಮೀಯ ಸ್ನೇಹಿತ ಮೊಯ್ನುದ್ದೀನ್ ನದಾಫ್‌ನನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವನು ದೆಹಲಿಯಲ್ಲಿ ಉದ್ಯೋಗದಲ್ಲಿದ್ದು, ಹಲವು ತಿಂಗಳಿಂದ ಪರಸ್ಪರ ಭೇಟಿ ಮಾಡಲು ಸಾಧ್ಯವಾಗಿಲ್ಲ, ಒಟ್ಟಿಗೆ ಕೂತು ಹರಟೆ ಹೊಡೆಯಲು, ಸುತ್ತಾಡಲು ಸಾಧ್ಯವಾಗುತ್ತಿಲ್ಲ.
- ಮಹಾಂತೇಶ ಜಾಂಗಟಿ, ಬೆಳಗಾವಿ.