ನಮ್ಮ ಸ್ನೇಹಕ್ಕೆ ಅಡ್ಡಿಯಾಗದ ವಯಸ್ಸಿನ ಅಂತರ: ಉಷಾ ಕೈಲಾಸದ್
ಫ್ರೆಂಡ್ ಶಿಪ್ ದಿನಾಚರಣೆ ವಿಶೇಷ
ನಿಮ್ಮ ಬೆಸ್ಟ್ ಫ್ರೆಂಡ್ ಹೆಸರೇನು?
ಜ್ಯೋತಿ
ಎಲ್ಲಿ ಯಾವಾಗ ಅವರನ್ನು ಭೇಟಿಯಾದಿರಿ?
2005ರಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವಾಗ
ನಿಮ್ಮ ಬೆಸ್ಟ್ ಫ್ರೆಂಡ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಿದ್ದು ಹೇಗೆ ?
ಅವರ ಪ್ರಾಮಾಣಿಕತೆ, ತಾಳ್ಮೆ, ಸೇವಾ ಮನೋಭಾವ, ವ್ಯಕ್ತಿಗಳೊಂದಿಗೆ ವ್ಯವಹರಿಸುವ ರೀತಿ
ಆ ಬೆಸ್ಟ್ ಫ್ರೆಂಡ್ ನಲ್ಲಿ ನೀವು ಇಷ್ಟಪಡುವ ಗುಣಗಳೇನು?
ಶತ್ರುಗಳಿಗೂ ಕೆಟ್ಟದ್ದನ್ನು ಬಯಸದ, ಅವರಿಗೂ ಸಹಾಯ ಮಾಡುವ ಓಳ್ಳೆಯತನ, ಪರಿಸ್ಥಿತಿ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವ ಚಾಕಚಕ್ಯತೆ, ಇತರರ ಎಲ್ಲಾ ತಪ್ಪನ್ನು ಕ್ಷಮಿಸಿ, ಅವರೊಂದಿಗೆ ನಗುತ್ತಾ ಮಾತಾಡುವುದು, ಯಾರನ್ನು ದ್ವೇಶಿಸದಿರುವುದು. ತಮ್ಮ ಕಷ್ಟದಲ್ಲೂ ಇತರರ ನೋವುಗಳಿಗೆ, ಕಷ್ಟಗಳಿಗೆ ಸ್ಪಂದಿಸಿ ಅವರ ಜೊತೆಯಾಗಿ ನಿಲ್ಲುವುದು.
ನಿಮ್ಮ ಬೆಸ್ಟ್ ಫ್ರೆಂಡ್ ನಿಮಗೆ ಸಿಟ್ಟು ಬರಿಸುವುದು ಯಾವಾಗ?
ಬೇಗ ಫೋನ್ ರೀಸೀವ್ ಮಾಡದೆ ಇದ್ದಾಗ, ಇವರ ಒಳ್ಳೆಯತನವನ್ನು ಕೆಲವರು ದುರುಪಯೋಗಪಡಿಸಿಕೊಳ್ಳುವುದು ಗೊತ್ತಿದ್ದು ಇವರು ಸುಮ್ಮನಿದ್ದಾಗ
ನಿಮ್ಮ ನಡುವಿನ ಸಾಮ್ಯತೆ ಏನು?
ಹಳೆಯ ಹಾಡುಗಳು, ಜಾನಪದ, ಭಾವಗೀತೆಗಳನ್ನು ಕೇಳುವುದು, ಇತರರ ವ್ಯಯಕ್ತಿಕ ಜೀವನ, ಸಂಬಂಧ, ಭಾವನೆಗಳಿಗೆ ಬೆಲೆ ಕೊಡುವುದು, ಇತರರ ತಪ್ಪನ್ನು ಮನ್ನಿಸಿ ನಾವೆ ಅವರೊಂದಿಗೆ ರಾಜಿಯಾಗುವುದು.
ನಿಮ್ಮ ನಡುವಿನ ವಿರೋಧಾಭಾಸಗಳು ?
ಸೈದ್ದಾಂತಿಕ ಭಿನ್ನಾಭಿಪ್ರಾಯ, ಅವರು ಬಲಪಂಥಿಯರು, ನಾನು ಎಡಪಂಥಿ, ಅವರು ಸಂಪೂರ್ಣ ತಾಳ್ಮೆ, ನಂಗೆ ಬೇಗ ಸಿಟ್ಟು ಬರುತ್ತೆ, ಅವರು ಯಾರಾದ್ರು ಅನಾವಶ್ಯಕವಾಗಿ ಏನಾದ್ರು ಅಂದ್ರೆ ಅದಕ್ಕೆ ಅವರು ಉತ್ತರಿಸಲ್ಲ, ತಲೆ ಕೆಡ್ಸ್ಕೋಳಲ್ಲ, ನಾನು ತಿರುಗಿ ಮಾತಾಡ್ತಿನಿ.
ನಿಮ್ಮ ನಡುವೆ ಏನಾದರೂ ಜಗಳ ನಡೆದಿದೆಯೇ?
ಹೌದು
ಮೊದಲು ರಾಜಿಯಾದದ್ದು ಯಾರು?
ಕೆಲವೊಮ್ಮೆ ನಾನು, ಕೆಲವೊಮ್ಮೆ ಅವರು
ನಿಮ್ಮ ಪ್ರಕಾರ ಫ್ರೆಂಡ್ ಶಿಪ್ ಅಂದ್ರೆ ಏನು?
ಎಂಥದ್ದೆ ಸಮಯದಲ್ಲಾದ್ರು ನಾವು ಅವರ ಜೊತೆಗಿರಬೇಕು, ದೈಹಿಕವಾಗಿ ಅಲ್ಲದಿದ್ರು ಮಾನಸಿಕವಾಗಿಯಾದ್ರು ಇರಬೇಕು, ಅವರಿಗಾಗಿ ನಾವು ಯಾವಾಗ್ಲೂ ಇದೀವಿ ಅನ್ನೋ ಸ್ತೈರ್ಯ ಕೊಡಬೇಕು
ನಿಮ್ಮ ಪ್ರಕಾರ ಬೆಸ್ಟ್ ಫ್ರೆಂಡ್ ಹೇಗಿರಬೇಕು ?
ದೇಹ , ಭಾವನೆಗಳು, ಅಭಿರುಚಿಗಳು ಬೇರೆಯಾದ್ರು ಒಬ್ಬರ ಮೇಲೊಬ್ಬರಿಗೆ, ಅವರ ಭಾವನೆಗಳಿಗೆ ಗೌರವಿಸೋ ಮನಸಿರಬೇಕು. ಕಷ್ಟಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸೋ ಗುಣ ಇರಬೇಕು. ಹುಸಿಕೋಪ, ಬೈದು ಬುದ್ದಿ ಹೇಳೋ ಹಕ್ಕು ಇರಬೇಕು.
ನಿಮ್ಮ ಬೆಸ್ಟ್ ಫ್ರೆಂಡ್ ಮೇಲೆ ನಿಮಗೆ ಯಾವತ್ತಾದರೂ ಹೊಟ್ಟೆಕಿಚ್ಚಾಗಿದೆಯೇ? ಹೌದು ಎಂದಾದರೆ ಏಕೆ?
ತುಂಬ ಸರಿ ಆಗಿದೆ. ಅವರ ತಾಳ್ಮೆ, ಸಹನೆ, ಅನಾವಶ್ಯಕ ಮಾತುಗಳಿಗೆ ತಲೆ ಕೆಡಿಸ್ಕೊಳ್ಳದೆ ಎಲ್ಲ ಜವಾಬ್ದಾರಿಯನ್ನ, ಸಂಬಂಧಗಳನ್ನ ನಿಭಾಯಿಸೋ ಗುಣ ನೋಡಿ.
ನೀವು ಮಿಸ್ ಮಾಡಿಕೊಳ್ಳುತ್ತಿರುವ ಬೆಸ್ಟ್ ಫ್ರೆಂಡ್ ಯಾರಾದರೂ ಇದ್ದಾರಾ ?
ಹೌದು, ತುಂಬ ಇದ್ದಾರೆ, ಮುಖ್ಯವಾಗಿ ನೂರ್ ಶ್ರೀಧರ್, ವಿದ್ಯಾ ಉಳಿತಾಯ, ನನ್ನ ಅಕ್ಕನ ಮಗಳು ದೀಪಿಕಾ, ತಂಗಿ ಮಗಳು ಧರಣಿ, ಗುರುಗಳಾದ ಚಿದಂಬರ ರಾವ್ ಜಂಬೆ, ಷರೀಫ್ ಅಹಮ್ಮದ್.
ಜ್ಯೋತಿ ಬಗ್ಗೆ ಇನ್ನೊಂದು ವಿಷಯ ಹೇಳೋದಿದೆ, ಆವರಿಗೂ ನಂಗು ವಯಸ್ಸಿನ ಅಂತರ ತುಂಬ ಇದೆ. ಅವರನ್ನ ನಾನು ಮಮ್ಮೀ ಅಂಥಾನೆ ಕರೆಯೋದು. ಬಲಪಂಥಿಯರಾದ್ರು ಸಹ ಯಾವುದೆ ಮುಢನಂಬಿಕೆಗಳನ್ನ, ಕಂದಾಚಾರಗಳನ್ನ, ಅತಿಯಾದ ಆಚಾರ ವಿಚಾರಗಳನ್ನ ಶಾಸ್ತ್ರ ಸಂಪ್ರದಾಯ, ಜಾತಿಯತೆಯನ್ನ ನಂಬೊದಿಲ್ಲ, ಧರ್ಮದ ಬಗ್ಗೆ ಅಭಿಮಾನ ಇದೆ ಆದ್ರೆ ಅದನ್ನ ಇನ್ನೊಬ್ಬರ ಮೇಲೆ ಹೇರೋದಿಲ್ಲ, ಮಹಿಳೆಯರಿಗಿರೋ ಕಟ್ಟುಪಾಡುಗಳನ್ನ ತೀವ್ರವಾಗೆ ವಿರೋಧಿಸ್ತಾರೆ, ಮಹಿಳಯರ ಆಹಾರ, ಉಡುಪು, ಆಯ್ಕೆ, ಆರ್ಥಿಕ ಸ್ವಾತಂತ್ರ್ಯ ಹೆಣ್ಣಿನ ಆಯ್ಕೆನೆ ಆಗಿರಬೇಕು ಅನ್ನೊ ದಿಟ್ಟ ನಿರ್ಧಾರ, ಅಂತರ್ಜಾತಿ, ಅಂತರ್ ಧರ್ಮ, ವಿಧವಾ ವಿವಾಹ, ವಿಚ್ಚೇದಿತ ಹೆಣ್ಣುಮಕ್ಕಳ ಮರು ವಿವಾಹಕ್ಕೆ ಪ್ರೋತ್ಸಾಹಿಸ್ತಾರೆ, ಇಡೀ ಮನೆಯ ಸಂಪೂರ್ಣ ಜವಾಬ್ದಾರಿ, ಗಂಡ ಮಕ್ಕಳ ಜವಾಬ್ದಾರಿಯನ್ನ ಒಬ್ಬರೆ ನಿಭಾಯಿಸ್ತ ಇತರ ಅಸಾಹಾಯಕ ಹೆಣ್ಣುಮಕ್ಕಳಿಗೂ ಸಹಾಯ ಮಾಡ್ತ, ಸ್ವತಂತ್ರವಾಗಿ ತಮ್ಮದೆ ದುಡಿಮೆಯಲ್ಲಿ ಬದುಕ್ತಾ ಇದಾರೆ.