ಅಕ್ರಮ ಮದ್ಯ ಮಾರಾಟ: ಓರ್ವನ ಸೆರೆ
ಶಿರ್ವ, ಆ.5: ಕಟ್ಟಿಂಗೇರಿ ಚೇತನಾ ವೈನ್ ಶಾಪ್ ಹಿಂಬದಿಯ ಶೆಡ್ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಶಿರ್ವ ಪೊಲೀಸರು ರವಿವಾರ ಬೆಳಗ್ಗೆ ಬಂಧಿಸಿದ್ದಾರೆ.
ಪೆರ್ಣಂಕಿಲದ ರಾಜೇಂದ್ರ ನಾಯಕ್(42) ಬಂಧಿತ ಆರೋಪಿ. ಈತನಿಂದ ಮದ್ಯ ಹಾಗೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story