ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ರಶೀದಾಗೆ ಕಂಚು
ಮಂಗಳೂರು, ಆ.6: ನೀರುಮಾರ್ಗದ ರೆಡ್ ಕಾಮೆಲ್ ಇಸ್ಲಾಮಿಕ್ ಸ್ಕೂಲ್ನಲ್ಲಿ ಇತ್ತೀಚೆಗೆ ದ.ಕ. ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ರೆಡ್ ಕಾಮೆಲ್ ಇಸ್ಲಾಮಿಕ್ ಸ್ಕೂಲ್ನ 8ನೇ ತರಗತಿ ವಿದ್ಯಾರ್ಥಿನಿ ರಶೀದಾ ಮುಹಮ್ಮದ್ ಝುಬೈರ್ ತೃತೀಯ ಸ್ಥಾನ ಗಳಿಸಿ ಕಂಚು ಜಯಿಸಿದ್ದಾರೆ.
ಕರಾಟೆ ತರಬೇತುದಾರ ಶಾಬಾಝ್ ನದೀಂ ಈಕೆಯ ತರಬೇತಿದಾರರಾಗಿದ್ದಾರೆ.
ರಶೀದಾ ಮಂಗಳೂರಿನ ಮುಹಮ್ಮದ್ ಝುಬೈರ್ ಮತ್ತು ನಸ್ರೀನ್ ಅರಾ ದಂಪತಿಯ ಪುತ್ರಿ.
Next Story