ಮಂಗಳೂರು : ಮೊಬೈಲ್ ಅಂಗಡಿಯಲ್ಲಿ ಕಳವು
ಮಂಗಳೂರು, ಆ.6: ಪಣಂಬೂರು ವ್ಯಾಪ್ತಿಯ ಕುಡಂಬೂರು ಗ್ರಾಮದಲ್ಲಿನ ಮೊಬೈಲ್ ಅಂಗಡಿಯಲ್ಲಿ ಸುಮಾರು ಎರಡು ಲಕ್ಷ ರೂ. ವೌಲ್ಯದ ಮೊಬೈಲ್ಗಳು ಕಳವಾದ ಘಟನೆ ರವಿವಾರ ತಡರಾತ್ರಿ ನಡೆದಿದೆ.
ಕುಡಂಬೂರು ನಿವಾಸಿ ಕಿಶನ್(30) ಎಂಬವರಿಗೆ ಸೇರಿದ ಮೊಬೈಲ್ ಅಂಗಡಿ ಕಳವಾಗಿದೆ 10 ಮೊಬೈಲ್ಗಳು, ಮೆಮೋರಿ ಕಾರ್ಡ್(ಚಿಪ್), ಬ್ಲೂಟೂಥ್ ಸಾಧನಗಳನ್ನು ಕಳವುಗೈಲಾಗಿದ್ದು, ಇವುಗಳ ವೌಲ್ಯ 2 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಎಂದಿನಂತೆ ಸೋಮವಾರವೂ ಬೆಳಗ್ಗೆ ಅಂಗಡಿ ತೆರೆಯಲು ಬಂದಿದ್ದ ಕಿಶನ್ ಬಂದಿದ್ದಾರೆ. ಈ ವೇಳೆ ಮೊಬೈಲ್ ಅಂಗಡಿಯ ಬಾಗಿಲು ಮುರಿದದ್ದು ಕಂಡು ಬಂದಿದೆ. ಒಳಪ್ರವೇಶಿಸಿ ಪರಿಶೀಲಿಸಿದಾಗ ಕಳವಾಗಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
Next Story