ಹೆಬ್ರಿ: ನವವಿವಾಹಿತ ಆತ್ಮಹತ್ಯೆ
ಹೆಬ್ರಿ, ಆ.6: ವೈಯಕ್ತಿಕ ಕಾರಣದಿಂದ ಮನನೊಂದ ನವವಿವಾಹಿತ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಗ್ಗೆ ಹೆಬ್ರಿ ಮಡಿವಾಳಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಹೆಬ್ರಿ ಮಡಿವಾಳಬೆಟ್ಟು ನಿವಾಸಿ ವಿಶ್ವನಾಥ ಮಡಿವಾಳ ಎಂಬವರ ಪುತ್ರ ರವಿ ಮಡಿವಾಳ (39) ಎಂದು ಗುರುತಿಸಲಾಗಿದೆ. ಇವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಹೆಬ್ರಿಯ ಕೆಳಪೇಟೆಯಲ್ಲಿ ಇಸ್ತ್ರಿಯ ಅಂಗಡಿ ವ್ಯವಹಾರ ನಡೆಸುತ್ತಿದ್ದ ಇವರು, ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದರು. ದಾಂಪತ್ಯ ಕಲಹವೇ ಆತ್ಮಹತ್ಯೆ ಕಾರಣ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story