ಮೆನ್ನಬೆಟ್ಟು ಗ್ರಾಪಂ ತೆರಿಗೆ ಪರಿಷ್ಕರಣೆ
ಮಂಗಳೂರು, ಆ.6: ಮಂಗಳೂರು ತಾಲೂಕಿನ ಮೆನ್ನಬೆಟ್ಟು ಗ್ರಾಮ ಪಂಚಾಯತ್ಗೆ ಸಂಬಂಧಿಸಿದಂತೆ 2018-19ನೇ ಸಾಲಿನಿಂದ ಅನ್ವಯವಾಗುವಂತೆ ಕರ್ನಾಟಕ ಗ್ರಾಮ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 199(ಎ) ಅನುಸೂಚಿಯಂತೆ ಮೆನ್ನಬೆಟ್ಟು ಗ್ರಾಪಂ ವ್ಯಾಪ್ತಿಯ ಎಲ್ಲ ಕಟ್ಟಡಗಳ ಅಳತೆ ಸ್ವರೂಪ ಬಳಕೆಗನುಗುಣವಾಗಿ ಸ್ವತ್ತಿನ ಮೌಲ್ಯದ ಆಧಾರದಲ್ಲಿ ಪರಿಷ್ಕರಿಸಲಾಗಿದೆ.
ಪರಿಷ್ಕೃತ ಕರಡು ಪ್ರತಿ ಮೆನ್ನಬೆಟ್ಟು ಗ್ರಾಪಂ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು, ತೆರಿಗೆ ದರ, ಅಳತೆ, ಕಟ್ಟಡ ಸ್ವರೂಪ ಮತ್ತು ಕಟ್ಟಡ ಮಾಲಕತ್ವದ ಬಗ್ಗೆ ಅಥವಾ ತೆರಿಗೆ ಪರಿಷ್ಕರಣೆ ಬಗ್ಗೆ ಇತರ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಗ್ರಾಪಂ ಕಚೇರಿ ಸಮಯದಲ್ಲಿ ಕರಡು ಪ್ರತಿ ಪರಿಶೀಲಿಸಿ ತಮ್ಮ ಆಕ್ಷೇಪಣೆಗಳನ್ನು ಲಿಖಿತವಾಗಿ ಸೂಕ್ತ ದಾಖಲೆಗಳೊಂದಿಗೆ ತಿಂಗಳ ಅವಧಿಯಲ್ಲಿ ಗ್ರಾಪಂ ಕಚೇರಿಗೆ ಸಲ್ಲಿಸಬಹುದಾಗಿದೆ. ನಿಗದಿತ ದಿನಾಂಕದ ನಂತರ ಬಂದ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.
Next Story