ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಉಡುಪಿ, ಆ.7: ವಿಪರೀತ ಮದ್ಯಪಾನದ ಚಟ ಹೊಂದಿದ್ದ ಅಂಬಲಪಾಡಿ ಅಂಬಾ ಲೇಔಟ್ ನಿವಾಸಿ ಬಾಬು ಸುವರ್ಣ ಎಂಬವರ ಮಗ ಮಿಲನ್(31) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಆ.6ರಂದು ರಾತ್ರಿ ವೇಳೆ ಮಲಗುವ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ: ಮನೆಯ ದನದ ಕೊಟ್ಟಿಗೆಯಲ್ಲಿದ್ದ ಕ್ರಿಮಿನಾಶಕ ಔಷಧಿಯನ್ನು ಜು.30ರಂದು ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಐರೋಡಿಯ ಪಮ್ಮಿ(80) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಜು.7ರಂದು ಬೆಳಗ್ಗೆ ಮಣಿಪಾಲ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ.
Next Story