ಭಾರೀ ಮಳೆ: ಹೊಸ್ಮಠ ಸೇತುವೆ ಮತ್ತೆ ಮುಳುಗಡೆ
ಕಡಬ, ಆ.8: ಉಪ್ಪಿನಂಗಡಿ-ಕಡಬ ಸಂಪರ್ಕ ರಸ್ತೆಯ ಹೊಸ್ಮಠ ಮುಳುಗು ಸೇತುವೆಯು ಬುಧವಾರ ಬೆಳಗ್ಗೆಯಿಂದ ಮುಳುಗಡೆಗೊಂಡಿದ್ದು, ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಕಡಬ ಪರಿಸರದಲ್ಲಿ ಮಂಗಳವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿದೆ. ಇದರಿಂದ ಬುಧವಾರ ಬೆಳಗ್ಗೆ ಹೊಸ್ಮಠ ನದಿಯಲ್ಲಿ ನೀರಿನ ಪ್ರಮಾಣ ಅಧಿಕಗೊಂಡು ಸೇತುವೆಯ ಮೇಲೆಯೇ ಹರಿಯಲಾರಂಭಿಸಿದೆ. ಪರಿಣಾಮ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯುಂಟಾಗಿದೆ. ಇದರಿಂದಾಗಿ ಉಪ್ಪಿನಂಗಡಿ ಹಾಗೂ ಕಡಬ ಕಡೆಗೆ ತೆರಳಬೇಕಿದ್ದ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವರು ಪರದಾಡುವಂತಾಗಿತ್ತು.
Next Story