ಪುದು: ತಾಲೂಕು ಮಟ್ಟದ ಚೆಸ್ ಪಂದ್ಯಾಟಕ್ಕೆ ಚಾಲನೆ
ಬಂಟ್ವಾಳ, ಆ. 8: ಪುದು ಗ್ರಾಮದ ಸುಜೀರ್ ಸರಕಾರಿ ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ಚೆಸ್ ಪಂದ್ಯಾಟಕ್ಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಫ್. ಉಮರ್ ಫಾರೂಕ್ ಫರಂಗಿಪೇಟೆ ಅವರು ಬುಧವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಚೆಸ್ ಬುದ್ಧಿಶಕ್ತಿ ವಿನಿಯೋಗದ ಆಟ. ಯೋಜನಾ ಸಾಮರ್ಥ್ಯ ಹಾಗೂ ಮುಂದೆ ಎದುರಾಗುವ ಸವಾಲುಗಳನ್ನು ನಿಭಾಯಿ ಸುವ ಮುಂದಾಲೋಚನೆಯೂ ಇದರಲ್ಲಿ ಅಡಗಿದೆ ಎಂದ ಅವರು, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ ಕ್ರೀಡಾ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಫರಂಗಿಪೇಟೆ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಬಾವ, ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಮಂಗಳ ವೈ, ಗ್ರಾಪಂ ಸದಸ್ಯೆ ಸುಜಾತ, ಟುಡೇ ಫೌಂಡೇಶನ್ ಸದಸ್ಯ ಮಜೀದ್ ಫರಂಗಿಪೇಟೆ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಝುಬೇರ್ ಸುಜೀರ್, ಇಂದಿರಾ ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಶಿಕ್ಷಕ ಜಯಪ್ರಕಾಶ್ ಸ್ವಾಗತಿಸಿ, ಮುಹಮ್ಮದ್ ಬಿ. ತುಂಬೆ ಕಾರ್ಯಕ್ರಮವನ್ನು ನಿರೂಪಿಸಿದರು.
Next Story