ಮಂಗಳೂರು: ಮಹಿಳೆಯರಿಂದ ಸೀರೆಯುಟ್ಟು ವಾಕಿಂಗ್
ಮಂಗಳೂರು, ಆ. 12: ಮಹಿಳೆಯರು ಸೀರುಯುಟ್ಟು ವಾಕಿಂಕ್ ಕಾರ್ಯಕ್ರಮವು ರವಿವಾರ ಬೆಳಗ್ಗೆ ನಗರದ ಮಣ್ಣಗುಡ್ಡೆಯ ಗಾಂಧಿನಗರ ಪಾರ್ಕ್ ಮುಂಭಾಗ ನಡೆಯಿತು.
ಮಂಗಳೂರಿನ ಮೆಡಿಮೈಡ್ ಸೊಲ್ಯುಷನ್, ಅಸೋಸಿಯೇಷನ್ ಲಯನ್ಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮಣ್ಣಗುಡ್ಡೆಯಿಂದ ಮಂಗಳಾ ಸ್ಟೇಡಿಯಂ ಮೂಲಕ ಮತ್ತೆ ಮಣ್ಣಗುಡ್ಡೆವರೆಗೆ 2ಕಿ.ಮಿ. ವಾಕಿಂಗ್ ನಡೆಯಿತು. ಸಾರಿಯಲ್ಲೂ ವಾಕಿಂಗ್ ಮಾಡಲು ಸಾಧ್ಯ ಎಂಬುದರ ಸಂದೇಶ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಹಿಳೆಯರು ತಿಳಿಸಿದರು. ಈ ಸಂದರ್ಭ ಸುಮಾರು 600 ಮಹಿಳೆಯರಿಂದ ವಾಕಿಂಕ್ ನಡೆಯಿತು.
Next Story