ಆಸ್ಟ್ರೊ ಮೋಹನ್ಗೆ ಐಸಿಎಸ್ನಿಂದ ಮಾಸ್ಟರ್ಸ್ ಪದವಿ
ಉಡುಪಿ, ಆ.12: ಛಾಯಾಚಿತ್ರ ಪತ್ರಕರ್ತ ಆಸ್ಟ್ರೊ ಮೋಹನ್ ಅವರಿಗೆ ಅಮೆರಿಕಾದ ಇಮೇಜ್ ಕೊಲೀಗ್ ಸೊಸೈಟಿ ಮಾಸ್ಟರ್ಸ್ ಪದವಿಯನ್ನು ನೀಡಿ ಗೌರವಿಸಿದೆ.
ಕಳೆದ ವರ್ಷ ಅವರು ಇದೇ ಸಂಸ್ಥೆಯಿಂದ ಫೆಲ್ಲೊಶಿಪ್ ಪಡೆದಿದ್ದರು. ಕಳೆದ 24 ವರ್ಷಗಳಿಂದ ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು 350ಕ್ಕೂ ಅಧಿಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story