ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ
ಮಣಿಪಾಲ, ಆ.12: ಹೆರ್ಗಾ ಗ್ರಾಮದ ಗುರುಕೃಪಾ ಆಪಾರ್ಟ್ಮೆಂಟ್ ಬಳಿಯ ಮನೆಯಲ್ಲಿ ಮಾರಾಟಕ್ಕಾಗಿ ಗಾಂಜಾವನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದ ಇಬ್ಬರನ್ನು ಮಣಿಪಾಲ ಪೊಲೀಸರು ಆ.12ರಂದು ಮಧ್ಯಾಹ್ನ ವೇಳೆ ಬಂಧಿಸಿದ್ದಾರೆ.
ಸುಯಾಶ್ ಶ್ರೀವಾತ್ಸವ್ ಹಾಗೂ ಮಾನಸ್ ಕೌಶಿಕ್ ಬಂಧಿತ ಆರೋಪಿಗಳು. ಪಾರಿತೋಷ್ ಕುಲಕರ್ಣಿ ಎಂಬಾತ ಪರಾರಿಯಾಗಿದ್ದಾನೆ. ಬಂಧಿತರಿಂದ 1 ಕೆಜಿ 712 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story