ಬಟ್ಟೆ ಅಂಗಡಿಯಲ್ಲಿ ಗಾಂಜಾ ಪತ್ತೆ: ಇಬ್ಬರ ಬಂಧನ
ಮಂಗಳೂರು, ಆ.14: ಬಡಗುಳಿಪ್ಪಾಡಿ ಗ್ರಾಮದ ಕೈಕಂಬದ ಬಟ್ಟೆ ಅಂಗಡಿಯೊಂದಲ್ಲಿ 1ಕಿಲೋ 140ಗ್ರಾಂ ಗಾಂಜಾ ಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಬಟ್ಟೆ ಅಂಗಡಿಯ ಮಾಲಕ ಮುಹಮ್ಮದ್ ನವಾಝ್ ಮತ್ತು ಸೇಲ್ಸ್ಮೆನ್ ಮುಹಮ್ಮದ್ ರಿಯಾಝ್ ಬಂಧಿತ ಆರೋಪಿಗಳು.
ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ದಾಸ್ತಾನು ಇಟ್ಟುಕೊಂಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉತ್ತರ ವಿಭಾಗದ ಎಸಿಪಿ ರಾಜೇಂದ್ರ ರೌಡಿ ನಿಗ್ರಹ ದಳದ ಸಿಬ್ಬಂದಿ, ಬಜಪೆ ಪೊಲೀಸ್ ನಿರೀಕ್ಷಕರೊಂದಿಗೆ ಆ.13ರಂದು ರಾತ್ರಿ 8:10ರ ವೇಳೆಗೆ ದಾಳಿ ನಡೆಸಿದ್ದರು.
ಈ ಸಂದರ್ಭ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೈಕಂಬ ಬಿ.ಎಸ್.ಟವರ್ ಬಿಲ್ಡಿಂಗ್ ನ ಕೆಳ ಅಂತಸ್ತಿನ ಫ್ಯಾಶನೆಟ್ ಬಟ್ಟೆ ಅಂಗಡಿಯಲ್ಲಿ 20 ಸಾವಿರ ರೂ. ಮೌಲ್ಯದ 1 ಕಿಲೋ 140ಗ್ರಾಂ ತೂಕದ ಗಾಂಜಾ ಪತ್ತೆಯಾಗಿದೆ. ಈ ಕುರಿತು ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story