ಪಟ್ಲ ತಖ್ವಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಉಳ್ಳಾಲ, ಆ.15: ಪಟ್ಲ ತಖ್ವಾ ಜುಮಾ ಮಸೀದಿ ಹಾಗು ಖವ್ವತುಲ್ ಇಸ್ಲಾಂ ಮದ್ರಸದ ಆಶ್ರಯದಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮದ್ರಸ ವಠಾರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ತಖ್ವಾ ಜುಮಾ ಮಸೀದಿ ಮುದರ್ರಿಸ್ ಅಲ್ಹಾಜ್ ಅಬೂ ಮುಖ್ತಾರ್ ಸಖಾಫಿ ಹಾಗು ಮಸೀದಿಯ ಅಧ್ಯಕ್ಷ ಮಹಮೂದ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಮದ್ರಸ ಮುಖ್ಯೋಪಾಧ್ಯರಾದ ಮುನೀರ್ ಲತೀಫಿ ಉಸ್ತಾದ್ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ಮದ್ರಸ ಅಧ್ಯಾಪಕ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಸ್ವಾತಂತ್ರ್ಯ ಸಂದೇಶ ಭಾಷಣ ಮಾಡಿ, ದೇಶಪ್ರೇಮವು ಸತ್ಯ ವಿಶ್ವಾಸದ ಭಾಗವಾಗಿದೆ ಎಂಬ ಶಾಂತಿ ಸೌಹಾರ್ದ, ಐಕ್ಯತೆಯನ್ನು ಬೋಧಿಸುವ ಮಹೋನ್ನತ ಸಂದೇಶವನ್ನು ಮಾನವಕುಲಕ್ಕೆ ನೀಡಿದ ಧರ್ಮವಾಗಿದೆ ಇಸ್ಲಾಂ ಎಂದರು.
ಈ ಸಂದರ್ಭದಲ್ಲಿ ಖುವ್ವತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಉಳ್ಳಾಲ ದರ್ಗಾ ಸಮಿತಿಯ ಸದಸ್ಯರಾದ ಮೊಯ್ದಿನ್ ಹಾಗೂ ಆಡಳಿತ ಸಮಿತಿ ಸದಸ್ಯರು, ಮದ್ರಸ ವಿದ್ಯಾರ್ಥಿಗಳು, ಊರ ನಾಗರಿಕರು ಉಪಸ್ಥಿತರಿದ್ದರು.
ಮಸೀದಿಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕಲ್ಲಾಪು ಸ್ವಾಗತಿಸಿದರು.