ಕೋಡಿಜಾಲ್ ಮಸೀದಿ ಆವರಣದಲ್ಲಿ 72ನೇ ಸ್ವಾತಂತ್ರ್ಯೋತ್ಸವ ಆಚರಣೆ
ಕೊಣಾಜೆ, ಆ.15: ಕೋಡಿಜಾಲ್ ರಿಫಾಯಿ ಜುಮಾ ಮಸ್ಜಿದ್, ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಕೋಡಿಜಾಲ್ ಹಾಗೂ ಜಿಸಿಸಿ ಘಟಕ, ಹಯಾತುಲ್ ಇಸ್ಲಾಂ ಮದ್ರಸ ಕೋಡಿಜಾಲ್ ಇದರ ಆಶ್ರಯದಲ್ಲಿ ಮಸೀದಿ ಆವರಣದಲ್ಲಿ 72ನೆ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಸೀದಿಯ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಧ್ವಜಾರೋಹಣಗೈದರು. ಮಸೀದಿಯ ಖತೀಬ್ ಅಲ್ಹಾಜ್ ಅಬೂಬಕರ್ ಸಖಾಫಿ ಮತ್ತು ರಾಮಕೃಷ್ಣ ಪ್ರೌಢಶಾಲೆಯ ಮುಖ್ಯಶಿಕ್ಷಕ ರವೀಂದ್ರ ರೈ ಸ್ವಾತಂತ್ರ ದಿನಾಚರಣೆಯ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಕೊಣಾಜೆ ಗ್ರಾಪಂ ಅಧ್ಯಕ್ಷ ಶೌಕತ್ ಅಲಿ, ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಅಬೂಬಕರ್, ಕೋಶಾಧಿಕಾರಿ ಹಾಜಿ ಮುಹಮ್ಮದ್, ಉಪಾಧ್ಯಕ್ಷರುಗಳಾದ ಅಬ್ದುಲ್ ಖಾದರ್, ಹಾಜಿ ಮುಹಮ್ಮದ್ ಕೆ.ಐ., ಮುಅಝ್ಝಿನ್ ಉಮರ್ ಸಅದಿ, ಇಬ್ರಾಹೀಂ ಎಚ್.ಎಂ., ಗ್ರಾಪಂ ಸದಸ್ಯ ಅಚ್ಯುತ ಗಟ್ಟಿ, ಮುತ್ತು ಶೆಟ್ಟಿ, ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ನ ಅಧ್ಯಕ್ಷ ಅಮೀರ್, ಉಪಾಧ್ಯಕ್ಷರುಗಳಾದ ಹನೀಫ್, ಲತೀಫ್ ಕೆ.ಎಂ., ರಝಾಕ್, ಕೋಶಾಧಿಕಾರಿ ಅಶ್ರಫ್ ಕೆ.ಎಸ್., ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ಜಿಸಿಸಿ ಘಟಕದ ಅಧ್ಯಕ್ಷ ಅನ್ವರ್ ಕೆ.ಎಂ.ಕೆ., ಪ್ರಧಾನ ಕಾರ್ಯದರ್ಶಿ ಆಸಿಫ್ ಕೆ.ಐ., ಮಾಜಿ ಅಧ್ಯಕ್ಷ ಸೂಫಿ ಇಬ್ರಾಹೀಂ, ಮದ್ರಸ ಆಡಳಿತ ಸಮಿತಿಯ ಹಸನ್ ಕುಂಞಿ, ಹಸೈನಾರ್ ಮತ್ತಿತರರು ಉಪಸ್ಥಿತರಿದ್ದರು.
ಮಸೀದಿಯ ಕಾರ್ಯದರ್ಶಿ ರಹ್ಮಾನ್ ಕೆ.ಎಸ್. ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಶರೀಫ್ ವಂದಿಸಿದರು.