ಮರಿಕ್ಕಳ: ಎಸ್ಸೆಸ್ಸೆಫ್ ನಿಂದ 72ನೇ ಸ್ವಾತಂತ್ರ್ಯ ದಿನಾಚರಣೆ
ಮೊಂಟೆಪದವು, ಆ.15: ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ ಹಾಗೂ ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಇದರ ಜಂಟಿ ಆಶ್ರಯದಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮರಿಕ್ಕಳ ಯುನಿಟ್ ಕಚೇರಿ ಮುಂಭಾಗದಲ್ಲಿ ಆಚರಿಸಲಾಯಿತು.
ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯೀಲ್ ಮಾಸ್ಟರ್ ಮೊಂಟೆಪದವು ದ್ವಜಾರೋಹಣಗೈದು ಸಂದೇಶ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ಅಧ್ಯಕ್ಷ ಇರ್ಷಾದ ಮದನಿ ಮೊಂಟೆಪದವು, ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್ ಲತೀಫಿ, ಎಸ್.ವೈ.ಎಸ್. ಮರಿಕ್ಕಳ ಬ್ರಾಂಚ್ ಅಧ್ಯಕ್ಷ ಆಲಿಕುಂಞಿ ಅಗಲ್ತಬೆಟ್ಟು, ಇಬ್ರಾಹೀಂ ಮದನಿ ನಿಡ್ಮಾಡ್, ಸಾಮಾಜಿಕ ಧುರೀಣ ಅಬೂಬಕರ್ ಆಳ್ವರಬೆಟ್ಟು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಬೂಬಕರ್ ಸಖಾಫಿ ಮರಿಕ್ಕಳ, ಮರಿಕ್ಕಳ ಜಮಾಅತ್ ಕಾರ್ಯದರ್ಶಿ ಅಬ್ಬಾಸ್ ಚಂದಹಿತ್ತಿಲು, ಹಮೀದ್ ಬಯಲು, ಕೆ.ಸಿ.ಎಫ್. ಕಾರ್ಯಕರ್ತರಾದ ಮಜೀದ್ ಮಜಲು, ಸಿದ್ದೀಕ್ ಚಂದಹಿತ್ತಿಲು, ಹನೀಫ್ ಚಂದಹಿತ್ತಿಲು, ಮರಿಕ್ಕಳ ಯುನಿಟ್ ಸದಸ್ಯರಾದ ಅಬ್ಬಾಸ್ ನಿಡ್ಮಾಡ್, ಸಿರಾಜ್ ನಿಡ್ಮಾಡ್, ಇಕ್ಬಾಲ್ ನಿಡ್ಮಾಡ್, ಸುಹೈಲ್ ಕೆಂಪುಗುಡ್ಡೆ, ನೌಫಲ್ ಮೋಂಟುಗೋಳಿ, ಅಶ್ರಫ್ ಬೆಂಗಳೂರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ ಕಾರ್ಯದರ್ಶಿ ಅಝರ್ ಸ್ವಾಗತಿಸಿದರು. ಶಾಕಿರ್ ಚಂದಹಿತ್ತಿಲು ಕಾರ್ಯಕ್ರಮ ನಿರೂಪಿಸಿದರು. ಮೋಂಟುಗೋಳಿ ಸೆಕ್ಟರ್ ಕಾರ್ಯದರ್ಶಿ ಸಿರಾಜ್ ಪಡಿಕ್ಕಲ್ ವಂದಿಸಿದರು.