ಇರಾ ಸಂಭ್ರಮದ ಸ್ವಾತಂತ್ರ್ಯೋತ್ಸವ
ಬಂಟ್ವಾಳ, ಆ.15: ಇರಾ ಗ್ರಾಮ ಪಂಚಾಯತ್, ಇರಾ ತಾಳಿತ್ತಬೆಟ್ಟು ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆ, ಇರಾ ಯುವಕ ಮಂಡಲದ ಆಶ್ರಯದಲ್ಲಿ 72ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಗ್ರಾಪಂ ಸದಸ್ಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿ ನಳಿನಿ ಎ.ಕೆ., ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮುರಳೀಧರ ಭಂಡಾರಿ, ಮುಖ್ಯ ಶಾಲಾ ಶಿಕ್ಷಕಿ ಸುಜಾತಾ ಟಿ.ಎಸ್., ಯುವಕ ಮಂಡಲದ ಅಧ್ಯಕ್ಷ ವಾಮನ ಡಿ., ಶಿಕ್ಷಕ ವೃಂದ, ಪಂಚಾಯತ್ ಸಿಬ್ಬಂದಿ ವರ್ಗ, ಯುವಕ ಮಂಡಲದ ಪದಾಧಿಕಾರಿಗಳು, ಊರ ಗಣ್ಯರು, ಶಾಲಾ ಮಕ್ಕಳು, ಎಸ್.ಡಿ.ಎಂ.ಸಿ. ಸದಸ್ಯರು ಪಾಲ್ಗೊಂಡಿದ್ದರು.
Next Story