ವಿಟ್ಲ ಪರ್ತಿಪ್ಪಾಡಿ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ
ವಿಟ್ಲ, ಆ.15: ಇಲ್ಲಿನ ಪರ್ತಿಪ್ಪಾಡಿ ಜುಮಾ ಮಸೀದಿಯ ವತಿಯಿಂದ ನಡೆದ 72ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಮಸೀದಿಯ ಅಧ್ಯಕ್ಷ ಕೆ.ಪಿ.ಇಸ್ಮಾಯೀಲ್ ಪರ್ತಿಪ್ಪಾಡಿ ನೆರವೇರಿಸಿದರು.
ಮಸೀದಿಯ ಖತೀಬ್ ಅಬ್ದುಲ್ ರಹಿಮಾನ್ ಫೈಝಿ ಸಂದೇಶ ಭಾಷಣ ಮಾಡಿದರು. ಖಲಂದರ್ ಪರ್ತಿಪ್ಪಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸಿ.ಎಚ್.ಮುಹಮ್ಮದ್ ಮುಸ್ತಫ ವಂದಿಸಿದರು.
ಮುಅಲ್ಲಿಂಗಳು, ಮದ್ರಸ ವಿದ್ಯಾರ್ಥಿಗಳು ಹಾಗೂ ಜಮಾಅತರು ಉಪಸ್ಥಿತರಿದ್ದರು.
Next Story