ಸ್ನೇಹ ಪಬ್ಲಿಕ್ ಸ್ಕೂಲ್ ವತಿಯಿಂದ ಸ್ವಾತಂತ್ರ್ಯಾಚರಣೆ
ಪಕ್ಕಲಡ್ಕ, ಆ. 15: ಸ್ನೇಹ ಪಬ್ಲಿಕ್ ಸ್ಕೂಲ್ ವತಿಯಿಂದ 72 ನೇ ಸ್ವಾತಂತ್ರ್ಯೊತ್ಸವವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಂಕನಾಡಿ ಬಿ ಬ್ಲಾಕ್ ಕಾರ್ಪುರೇಟರ್ ಪ್ರವೀಣ್ ಚಂದ್ರ ಆಳ್ವರವರು ಧ್ವಜಾಹರೋಹಣ ನಡೆಸಿ ಸಭಿಕರನ್ನುದ್ದೇಶಿ ಮಾತನಾಡಿದರು.
ಶಿಕ್ಷಕಿ ಜುಲಿಯಟ್ ಸ್ವಾತಂತ್ರ್ಯೋತ್ಸವದ ದಿಕ್ಸೂಚಿ ಭಾಷಣ ಮಾಡಿದರು. ಮಕ್ಕಳು ರಾಷ್ಟ್ರಗೀತೆ ಮತ್ತು ದೇಶಭಕ್ತಿಗೀತೆಗಳನ್ನು ಹಾಡಿದರು. ಮುಖೋಪಧ್ಯಾಯಿನಿ ನಾಗರತ್ನ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ಫೌಝಿಯಾ ಮೇಡಂ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಸಂಚಾಕರಾದ ಯೂಸುಫ್ ಪಕ್ಕಲಡ್ಕ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಪಿ.ಬಿ, ಉಪಾಧ್ಯಕ್ಷ ಅಬೂಬಕ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು
Next Story