ಕಲ್ಲಡ್ಕ: ಮುಹಿಯುದ್ದೀನ್ ಮಸೀದಿ ಆಡಳಿತ ಸಮಿತಿಗೆ ಚುನಾವಣೆ
ವಿಟ್ಲ, ಆ.16: ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಆಡಳಿತ ಸಮಿತಿಗೆ ಇಲ್ಲಿನ ಮದ್ರಸದಲ್ಲಿ ಇಂದು ಚುನಾವಣೆ ನಡೆಯುತ್ತಿದೆ.
ಬೆಳಗ್ಗೆ 9ರಿಂದ ಆರಂಭಗೊಂಡಿರುವ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಒಟ್ಟು 553 ಮಂದಿ ಮತದಾನ ಮಾಡುವ ಅವಕಾಶ ಹೊಂದಿದ್ದು, ಈ ಪೈಕಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ವೇಳೆಗೆ 327 ಮಂದಿ ಮತ ಚಲಾಯಿಸಿದ್ದಾರೆ. ಆ ಮೂಲಕ ಶೇಕಡ 61ಮತದಾನ ನಡೆದಿದೆ.
3 ಗಂಟೆಯವರೆಗೆ ಮತ ಚಲಾಯಿಸಲು ಅವಕಾಶ ಇದೆ. ಸಂಜೆ 5 ಗಂಟೆಗೆ ಫಲಿತಾಂಶ ಹೊರಬೀಳಲಿದೆ.
Next Story