ಗುರುಪುರ ಅಲ್- ಹೈದ್ರುಸಿಯಾದಲ್ಲಿ ಸ್ವಾತಂತ್ರೋತ್ಸವ
ಮಂಗಳೂರು, ಆ.16: ರೋಯಲ್ಗೈಸ್ ಗುರುಪುರ ಇವರಿಂದ ಗುರುಪುರದ ಅಲ್- ಹೈದ್ರುಸಿಯಾ ಜುಮಾ ಮಸೀದಿಯಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನಡೆಸಲಾಯಿತು.
ಮಸೀದಿಯ ಮುಖ್ಯಕತೀಬ್ ಉಸ್ತಾದ್ ನಝೀರ್ ಫೈಜಿ ದುಆಗೈದು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಹಮ್ಮದ್ ನಯೀಮ್ ಜಿ.ಎಂ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೋಯಲ್ಗೈಸ್ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Next Story