ಮಲ್ಪೆ ಕಿನಾರೆಯಲ್ಲಿ ಮೃತದೇಹ ಪತ್ತೆ
ಮಲ್ಪೆ, ಆ.17: ಮೂರು ದಿನಗಳ ಹಿಂದೆ ಮಲ್ಪೆ ಸಮುದ್ರ ಕಿನಾರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯೊಬ್ಬರ ಮೃತದೇಹವನ್ನು ವಾರೀಸುದಾರರ ಪತ್ತೆಯಾಗದ ಹಿನ್ನೆಲೆಯಲ್ಲಿ ಇಂದು ಮಲ್ಪೆ ಪೊಲೀಸರು ಬೀಡಿನಗುಡ್ಡೆಯಲ್ಲಿ ಧಪನ ಕಾರ್ಯ ನೆರವೇರಿಸಿದರು.
ಮೃತರನ್ನು ಸುಮಾರು 35ರಿಂದ 40 ವರ್ಷ ವಯಸ್ಸಿನ ಮಡಿಕೇರಿ ಜಿಲ್ಲೆಯ ಪ್ರಶಾಂತ್ ಎಂದು ಗುರುತಿಸಲಾಗಿದ್ದು, ಇವರು ಕುಂದಾಪುರ ಮತ್ತು ಮಲ್ಪೆ ಯಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸಿಕೊಂಡಿದ್ದರೆಂದು ಎಂದು ತಿಳಿದುಬಂದಿದೆ. ಈವರೆಗೆ ವಾರೀಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ ಮೃತದೇಹವನ್ನು ಧಪನ ಮಾಡಲಾಯಿತು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story