ಇನ್-ಲ್ಯಾಂಡ್ ಪ್ರಾಪರ್ಟಿ ಮೇಳ 2018ಕ್ಕೆ ಗ್ರಾಹಕರ ಅತ್ಯುತ್ತಮ ಸ್ಪಂದನೆ
ಮಂಗಳೂರು, ಆ.18: ಕರಾವಳಿ ಪ್ರದೇಶದ ಪ್ರಮುಖ ಕಟ್ಟಡ ನಿರ್ಮಾಣ ಸಂಸ್ಥೆಯಾಗಿರುವ ಇನ್-ಲ್ಯಾಂಡ್ ಬಿಲ್ಡರ್ಸ್ ತನ್ನ ಕಚೇರಿಯ ಆವರಣದಲ್ಲಿ ಆಯೋಜಿಸಿರುವ ‘ಪ್ರಾಪರ್ಟಿ ಉತ್ಸವ’ ಭಾರೀ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ.
ಕಳೆದ ಕೆಲವು ತಿಂಗಳುಗಳಿಂದ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಮಂದಗೊಂಡಿದ್ದರಿಂದ ನಾವು ಈ ಮೇಳ ಆರಂಭಿಸಿದಾಗ ಗ್ರಾಹಕರಿಂದ ಈ ಪ್ರಮಾಣದಲ್ಲಿ ಸ್ಪಂದನೆಯನ್ನು ನಿರೀಕ್ಷಿಸಿರಲಿಲ್ಲ. ಆದರೆ ನಾವು ನೀಡುತ್ತಿರುವ ಒಂದು ಬಾರಿಯ ಬೃಹತ್ ರಿಯಾಯಿತಿ ಸೂಜಿಗಲ್ಲಿನಂತೆ ಗ್ರಾಹಕರನ್ನು ಸೆಳೆಯುತ್ತಿದೆ. ನಮ್ಮ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯಿಂದಾಗಿ ಇನ್-ಲ್ಯಾಂಡ್ ಮನೆಯೊಂದನ್ನು ಖರೀದಿಸಬೇಕು ಎಂದು ಸದಾ ಬಯಸುತ್ತಿದ್ದವರಿಗೆ ಈ ಉತ್ಸವ ತಮ್ಮ ಕನಸಿನ ಮನೆಯನ್ನು ಖರೀದಿಸಲು ಸುವರ್ಣಾವಕಾಶವಾಗಿ ಪರಿಣಮಿಸಿದೆ ಎಂದು ಗ್ರಾಹಕರ ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿರುವ ಸಂಸ್ಥೆಯ ಸೀನಿಯರ್ ಮ್ಯಾನೇಜರ್ (ಮಾರ್ಕೆಟಿಂಗ್ ಆ್ಯಂಡ್ ರೇರಾ ಕಂಪ್ಲಾಯನ್ಸ್) ಉಲ್ಲಾಸ ಕದ್ರಿ ಅವರು ಹೇಳಿದರು.
ಸಂಸ್ಥೆಯ ವಿವಿಧ ಯೋಜನೆಗಳ ಬಗ್ಗೆ ಗ್ರಾಹಕರು ಅಭೂತಪೂರ್ವಕವಾಗಿ ಸ್ಪಂದಿಸುತ್ತಿದ್ದಾರೆ. ವಿವಿಧ ಯೋಜನೆಗಳಲ್ಲಿ 5 ಲ.ರೂ. ಗಳಿಂದ 17 ಲ.ರೂ.ಗಳ ವರೆಗೂ ನಾವು ರಿಯಾಯಿತಿಗಳನ್ನು ನೀಡುತ್ತಿದ್ದೇವೆ. ಉದಾಹರಣೆಗೆ 43 ಲ.ರೂ.ಗಳ 2ಬಿಎಚ್ಕೆ ಫ್ಲಾಟ್ನ್ನು ಕೇವಲ 37 ಲ.ರೂ.ಗಳಿಗೆ ನೀಡುತ್ತಿದ್ದೇವೆ ಎಂದರು.
ಗ್ರಾಹಕರಿಗೆ ತಮ್ಮ ಆದ್ಯತೆಗಳ ಮೇರೆಗೆ ಯೋಜನೆಗಳ ಮೌಲ್ಯಮಾಪನ ಮತ್ತು ಆಯ್ಕೆಗಳಿಗೆ ಸಾಕಷ್ಟು ಕಾಲಾವಕಾಶವಿದ್ದು, ಅವರು ಅವಸರದ ನಿರ್ಧಾರಗಳನ್ನು ಕೈಗೊಳ್ಳಬೇಕಿಲ್ಲ. ಹೀಗಾಗಿ 18 ದಿನಗಳ ಕಾಲ ಈ ಪ್ರಾಪರ್ಟಿ ಮೇಳ ಹಮ್ಮಿಕೊಳ್ಳುವ ನಿರ್ಧಾರ ಸರಿಯಾಗಿಯೇ ಇದೆ ಎನ್ನುವುದು ಸಿದ್ಧಗೊಂಡಿದೆ ಎಂದು ಉಲ್ಲಾಸ ಕದ್ರಿ ಹೇಳಿದರು.
ಇನ್-ಲ್ಯಾಂಡ್ ಬೆಂಗಳೂರು, ಮಂಗಳೂರು, ಉಳ್ಳಾಲ ಮತ್ತು ಪುತ್ತೂರುಗಳಲ್ಲಿ ವಸತಿ ಯೋಜನೆಗಳನ್ನು ಹೊಂದಿದ್ದು, ಉದ್ಯಮದಲ್ಲಿ ತನ್ನದೇ ಆದ ಪ್ರತಿಷ್ಠೆಯನ್ನು ಹೊಂದಿದೆ. ಸಂಸ್ಥೆಯು ಪ್ರಗತಿಯಲ್ಲಿರುವ ತನ್ನೆಲ್ಲ ಯೋಜನೆಗಳಿಗೆ ರೇರಾ ಪ್ರಮಾಣಪತ್ರ ಪಡೆದುಕೊಂಡ ಮೊದಲಿಗರಲ್ಲಿ ಒಂದಾಗಿದೆ. ಇದು ಈಗಾಗಲೇ ತನ್ನೆಲ್ಲ ಯೋಜನೆಗಳಿಗೆ ಕ್ಲಪ್ತ ಸಮಯದಲ್ಲಿ ವಸತಿ ಪ್ರಮಾಣಪತ್ರ ಪಡೆದುಕೊಳ್ಳುವ ವಿಶಿಷ್ಟ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಸ್ಥೆಯ ಪಾಲಿಗೆ ಇನ್ನೊಂದು ಹೆಮ್ಮೆಯ ತುರಾಯಿಯಾಗಿದೆ.
ಇನ್-ಲ್ಯಾಂಡ್ ಗುಣಮಟ್ಟಕ್ಕೆ ಇನ್ನೊಂದು ಹೆಸರಾಗಿದೆ. ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಇನ್ಲ್ಯಾಂಡ್ ವಿಂಡ್ಸರ್ಸ್ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳಿಗೆ ಭಾಜನವಾಗಿರುವ ಮಂಗಳೂರಿನ ಏಕೈಕ ಯೋಜನೆಯಾಗಿದೆ.
ನಮ್ಮ ಹಲವಾರು ಸಂತೃಪ್ತ ಗ್ರಾಹಕರು ಹೊಸ ಯೋಜನೆಗಳಲ್ಲಿ ಇನ್ನಷ್ಟು ಹೂಡಿಕೆಯ ಅವಕಾಶವಾಗಿ ಬಳಸಿಕೊಳ್ಳಲು ಉತ್ಸವಕ್ಕೆ ಭೇಟಿ ನೀಡಿದ್ದಾರೆ. ನಮ್ಮ ಹಲವಾರು ಅಪಾರ್ಟ್ಮೆಂಟ್ಗಳು ಈಗಾಗಲೇ ಬಾಡಿಗೆಯನ್ನು ಗಳಿಸುತ್ತಿವೆ. ಉದಾಹರಣೆಗೆ 2ಬಿಎಚ್ಕೆ ಫ್ಲಾಟ್ನಲ್ಲಿ 37 ಲ.ರೂ.ಗಳನ್ನು ವಿನಿಯೋಗಿಸಿದರೆ ವಾರ್ಷಿಕ 1.20 ಲ.ರೂ.ಬಾಡಿಗೆ ಆದಾಯವನ್ನು ಗಳಿಸಬಹುದು. ಇದು ತಮ್ಮ ಹಣವನ್ನು ಕಡಿಮೆ ಬಡ್ಡಿಯ ಬ್ಯಾಂಕ್ ಠೇವಣಿಗಳು ಅಥವಾ ಅಪಾಯಕಾರಿ ಶೇರು ಹೂಡಿಕೆಗಳಲ್ಲಿ ತೊಡಗಿಸುತ್ತಿದ್ದ ಹಲವಾರು ಗಲ್ಫ್ ಹೂಡಿಕೆದಾರರಿಗೆ ಹೊಸ ಮಾರ್ಗವನ್ನು ತೋರಿಸಿದೆ ಎಂದು ಹೇಳಿದ ಉಲ್ಲಾಸ ಕದ್ರಿ, ಹಲವಾರು ಪ್ರಮುಖ ಅಪಾರ್ಟ್ಮೆಂಟ್ಗಳಿಗೆ ಬೇಡಿಕೆಗಳು ಹೆಚ್ಚುತ್ತಿವೆ. ಹೀಗಾಗಿ ಈ ಅವಕಾಶವನ್ನು ತ್ವರಿತವಾಗಿ ಬಳಸಿಕೊಳ್ಳುವಂತೆ ಗ್ರಾಹಕರಿಗೆ ಸಲಹೆ ನೀಡಿದರು. ಈ ವಿಶೇಷ ಕೊಡುಗೆಯನ್ನು ಒಂದು ಬಾರಿ ಮಾತ್ರ ನೀಡಲಾಗಿದೆ ಮತ್ತು ಈ ಅವಕಾಶ ಮತ್ತೊಮೆ ದೊರೆಯುವುದಿಲ್ಲ ಎಂದೂ ಅವರು ತಿಳಿಸಿದರು.
ಇನ್-ಲ್ಯಾಂಡ್ ಪ್ರಾಪರ್ಟಿ ಮೇಳ 2018ನ್ನು ದಾಯ್ಜಿವರ್ಲ್ಡ್ ಸ್ಥಾಪಕ ಹಾಗೂ ಎಂಡಿ ವಾಲ್ಟರ್ ನಂದಳಿಕೆ ಅವರು ಆ.8ರಂದು ಉದ್ಘಾಟಿಸಿದ್ದು, ಇನ್-ಲ್ಯಾಂಡ್ ಗ್ರೂಪ್ನ ಅಧ್ಯಕ್ಷ ಹಾಗೂ ಎಂಡಿ ಸಿರಾಜ್ ಅಹಮದ್, ನಿರ್ದೇಶಕ ಮಿರಾಜ್ ಯೂಸುಫ್, ಯೆನೆಪೊಯ ವಿವಿಯ ಚಾನ್ಸಲರ್ ವೈ. ಅಬುಲ್ಲಾ ಕುಂಞಿ, ಹಿರಿಯ ವಕೀಲ ಎಂಪಿ ಶೆಣಾಯ್ ಮತ್ತು ಕಾರ್ಪೊರೇಷನ್ ಬ್ಯಾಂಕಿನ ಡಿಜಿಎಂ ಮತ್ತು ರೆನಲ್ ಹೆಡ್ ಎ.ಕೆ. ವಿನೋದ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮೇಳ ತಾಣ: ಮೂರನೇ ಮಹಡಿ, ಇನ್ಲ್ಯಾಂಡ್ ಆರ್ನೇಟ್, ನವಭಾರತ ವೃತ್ತ, ಮಂಗಳೂರು
ದಿನಾಂಕಗಳು: ಆ.8ರಿಂದ ಆ.26ರವರೆಗೆ
ಸಮಯ: ಬೆಳಗ್ಗೆ 9:30ರಿಂದ ರಾತ್ರಿ 8:30 ರವರೆಗೆ
ಸಂಪರ್ಕ ಸಂಖ್ಯೆಗಳು: 8197168444, 9880138015, 9972089099, 9880138019, 9972014055, 9686064312
ಮೇಲ್: info@inlandbuilders.net
ಪ್ರಯೋಜಿತ